ಕಾಗವಾಡದ ಐನಾಪುರದಲ್ಲಿ ನವಜೀವನೋತ್ಸವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಬಿ ಸಿ ಟ್ರಸ್ಟ್ ಕಾಗವಾಡ ತಾಲೂಕು, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಥಣಿ ಜಿಲ್ಲೆ ಪರಮ ಪೂಜ್ಯ ಪದ್ಮ ವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಅಮ್ಮನವರಯ ಶುಭಾರ್ಷಿವಾದಗೊಳಂದಿಗೆ ಕಾಗವಾಡ ತಾಲೂಕಿನಲ್ಲಿ ಪಾನಮುಕ್ತ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಾನ್ಯ ಜಿಲ್ಲಾ ನಿರ್ದೆಶಕರಾದ ಶ್ರೀಮತಿ ನಾಗರತ್ನಾ ಹೆಗಡೆ ಹಾಗೂ ಮದ್ಯವರ್ಜನ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ನಿರ್ದೆಶಕರು ನವಜೀವನಕ್ಕೆ ಪಾದಾರ್ಪಣೆ ಮಾಡಿದ ಸದಸ್ಯರಿಗೆ ನವ ಜೀವನಕ್ಕೆ ಶುಭ ಹಾರೈಸಿ ಪಾನಮುಕ್ತ ಜೀವನ ತ್ಯಜೀಸಿ ಕುಟುಂಬದ ಜೊತೆಗೆ ಸುಂದರ ಜೀವನ ಕಟ್ಟಿಕೊಳಲು ಮಾರ್ಗದರ್ಶನ ನೀಡಿದರು ಹಾಗೂ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಬಾಸ್ಕರ ಅವರು ನವಜೀವನ ಸದಸ್ಯರಿಗೆ ಕುಟುಂಬದ ನಿರ್ವಹಣೆ ಹಾಗೂ ವೈಯುಕ್ತಿಕ ಜೀವನದಲ್ಲಿ ಹೇಗೆ ಸುಧಾರಣೆ ಆಗಬೇಕು ಅನ್ನುವುದರ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಪ್ರಕಾಶ ಅಪ್ಪಾಸಾಬ ಕೊರ್ಬು ಉಪಾದ್ಯಕ್ಷರು ಮ.ವ್ಯ ಸಮೀತಿ ಐನಾಪುರ, ಶ್ರೀ ವಿಠ್ಠಲ ಶಂ ಹಳ್ಳೊಳಿ ಜ ವೇ ಸದಸ್ಯರು ಅಥಣಿ, ಶ್ರೀ ಎಸ್, ಎಸ್, ಚೌಗಲೆ, ಶ್ರೀಮತಿ ಸುಕನ್ಯಾಮಳಿಮಠ, ಶ್ರೀ ಬಾಸ್ಕರ್ ಎನ್ ಯೋಜನಾಧಿಕಾರಿಗಳು ಜನಜಾಗೃತಿ ವೇದಿಕೆ ಧಾರವಾಡ, ಶ್ರೀ ಸಂಜೀವ ಮರಾಠಿ ತಾಲೂಕು ಯೋಜನಾಧಿಕಾರಿಗಳು ಕಾಗವಾಡ,ವಲಯ ಮೇಲ್ವಿಚಾರಕರು, ನವಜೀವನ ಸದಸ್ಯರು, ಪೋಷಕರು ಸೇವಾಪ್ರತಿನಿದಿಗಳು ಉಪಸ್ಥಿತಿ ಇದ್ದರು.
