ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯ ರಾಯಭಾಗ ತಾಲೂಕು ಕಂಕನವಾಡಿ ಗ್ರಾಮದಲ್ಲಿ ನಡೆದ ನವಜೀವನ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಸಾಲಿಯನ್ ರವರು ನವಜೀವನ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷರಾದ ಗಿರೀಶ ಪಾಟೀಲ, ಜನಜಾಗೃತಿ ಸದಸ್ಯರುಗಳಾದ ಶ್ರೀಮತಿ ವಿದ್ಯಾ, ಶ್ರೀಯುತ ಪ್ರದೀಪ ಪಾಟೀಲ, ಹಾಲಸಿದ್ದೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿಯ ಸದಸ್ಯರುಗಳಾದ ಮೋಹನ್ ದೇಸಾಯಿ, ವಿಠ್ಠಲ್ ಪೂಜಾರಿ, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಎನ್, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸಚಿನ್, ವಲಯ ಮೇಲ್ವಿಚಾರಕ ಗಣೇಶ, ಜನಜಾಗೃತಿ ಮೇಲ್ವಿಚಾರಕ ಉಮೇಶ, ಕೃಷಿ ಮೇಲ್ವಿಚಾರಕರು, ಬೆಂಡವಾಡ ವಲಯದ ಮೇಲ್ವಿಚಾರಕರು, ಕಂಕಣವಾಡಿ ವಲಯದ ಸೇವಾಪ್ರತಿನಿಧಿಗಳು, ಕಂಕಣವಾಡಿ ಶೌರ್ಯ ವಿಪತ್ತು ಶೌರ್ಯ ಸ್ವಯಂ ಸೇವಕರು ಉಪಸ್ಥಿತರಿದ್ದರು.
