ಮೈಸೂರು ಜಿಲ್ಲಾ ವ್ಯಾಪ್ತಿಯ ಮೈಸೂರು, ಹುಲ್ಲಳ್ಳಿ, ನಂಜನಗೂಡು, ಟಿ ನರಸೀಪುರ, ಕುವೆಂಪು ನಗರ, ಬನ್ನೂರು, ಎಚ್ ಡಿ ಕೋಟೆ ತಾಲೂಕಿನ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಗಾರ

Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ). ಮೈಸೂರು ಜಿಲ್ಲೆ, ಮೈಸೂರು ಜಿಲ್ಲಾ ವ್ಯಾಪ್ತಿಯ ಮೈಸೂರು, ಹುಲ್ಲಳ್ಳಿ, ನಂಜನಗೂಡು, ಟಿ ನರಸೀಪುರ, ಕುವೆಂಪು ನಗರ, ಬನ್ನೂರು, ಎಚ್ ಡಿ ಕೋಟೆ ತಾಲೂಕಿನ
ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಗಾರ ಕಾರ್ಯಕ್ರಮವು ಮೈಸೂರು ಜಿಲ್ಲಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ಪಾಯಸ್ ರವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾಜದಯುವ ಪೀಳಿಗೆ, ದೇಶದ ಆಸ್ತಿಯಾಗಬೇಕಾದ ವಿದ್ಯಾರ್ಥಿಗಳು ಇಂದು ದುಷ್ಚಟಕ್ಕೆ ಬಲಿಯಾಗುತ್ತಿದ್ದು, ತಮ್ಮ ಜೀವನವನ್ನು ಹಾಳು ಮಾಡುಕೊಳ್ಳುತ್ತಿದ್ದಾರೆ. ಪರಮ ಪೂಜ್ಯ ಖಾವಂದರ ಆಶಯದಂತೆ ದುಷ್ಚಟಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಜನಜಾಗೃತಿ ಎಂಬ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತವಾಗಿ ಹಮ್ಮಿಕೊಂಡಿದ್ದು,
ಈ ನಿಟ್ಟಿನಲ್ಲಿ ವಿದ್ಯಾರ್ಥಿ – ವಿದ್ಯಾರ್ಥಿನಿ ಮಿತ್ರರು ಅತೀ ಬೇಗ ದುಷ್ಟಟಕ್ಕೆ ಬಲಿಯಾಗುತ್ತಿದ್ದು, ಪ್ರತೀ ಶಾಲೆ,ಕಾಲೇಜುಗಳಲ್ಲಿ “ಸ್ವಾಸ್ಥ್ಯ ಸಂಕಲ್ಪ” ಎಂಬ ಕಾರ್ಯಕ್ರಮದ ಮೂಲಕ ಯಾವೆಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಜಾಗೃತಿ ಮೂಡಿಸಬೇಕು ಎನ್ನುವ ವಿಚಾರಗಳನ್ನು ತರಬೇತುದಾರರಿಗೆ ಮಾಹಿತಿ-ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ‌ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ ನಾಗನಾಳ mis ಯೋಜನಾಧಿಕಾರಿಗಳಾದ ಶ್ರೀ ಮಾಧವ್ ಗೌಡ, ಜನಜಾಗ್ರತಿ ಪ್ರಾದೇಶಿಕ ಯೋಜನಾಧಿಕಾರಿ ಮಾದವ ನಾಯಕ್, ಜಿಲ್ಲಾ ವಿಚಕ್ಷಣಾಧಿಕಾರಿ ಶ್ರೀ ಮಂಜುನಾಥ್ ಮರಾಠಿ ಮತ್ತು ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ಶ್ರೀ ವಸಂತ್ ಹಾಗೂ, 40 ಜನ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರು ಉಪಸ್ಥಿತರಿದ್ದರು.