ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಕೆ.ಆರ್ ನಗರ ಜಿಲ್ಲೆಯ ಹುಣಸೂರು ತಾಲೂಕಿನ ಗೆರೆಸಿನಹಳ್ಳಿ ಗ್ರಾಮದ ಬಿಳಿಕೆರೆ ವಲಯದಲ್ಲಿ ತಾಲೂಕು ಮಟ್ಟದ ತಾಲೂಕು ಮಟ್ಟದ ನವಜೀವನ ಸಮಿತಿಯ ನವಜೀವನೋತ್ಸವ ಹಾಗೂ ಭಜನೋತ್ಸವ ಕಾರ್ಯಕ್ರಮವು ಕೊಮ್ಮೇಗೌಡನ ಕೊಪ್ಪಲಿನ ರಾಮ ಮಂದಿರದ ಆವರಣದಲ್ಲಿ ನಡೆಯಿತು. ಭಜನಾ ಮಂಗಳೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗೌರವಾನ್ವಿತ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ಪಾಯಸ್ ರವರು ನವಜೀವನ ಸಮಿತಿಯ ಸದಸ್ಯರುಗಳಿಗೆ ಹಾಗೂ ನೆರೆದಿದ್ದ ಸಭಿಕರನ್ನುದ್ದೇಶಿಸಿ ದುಷ್ಚಟಮುಕ್ತ ಸಮಾಜದ ಪೂಜ್ಯರ ಕನಸಿನ ಕಾರ್ಯಕ್ರಮವನ್ನು ಬೆಳೆದುಬಂದ ದಾರಿ ಮತ್ತು ದುಷ್ಚಟದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗಾಯತ್ರಮ್ಮ, ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪಲತಾ, ಊರಿನ ಮುಖಂಡರಾದ ಶ್ರೀ ದೇವರಾಜ್ ಗೌಡ, ಜಿಲ್ಲಾ ನಿರ್ದೇಶಕರಾದ ಶ್ರೀ ಮುರಳೀಧರ್, ಯೋಜನಾಧಿಕಾರಿಗಳಾದ ಶ್ರೀ ಧನಂಜಯ್, ಜನಜಾಗೃತಿ ಯೋಜನಾಧಿಕಾರಿಗಳಾದ ಮಾಧವ ನಾಯಕ್, ಶಿಭಿರಾಧಿಕಾರಿಯಾದ ಶ್ರೀ ದಿನೇಶ್, ಆರೋಗ್ಯ ಸಹಾಯಕಿ ಶ್ರೀಮತಿ ಪ್ರಸಿಲ್ಲಾ, ಮೇಲ್ವಿಚಾರಕರಾದ ವಸಂತ್, ಶ್ರೀಮತಿ ವೀಣಾ, ಶ್ರೀ ಕಿರಣ್, ನವಜೀವನ ಸಮಿತಿಯ ಪೋಷಕರಾದ ಶ್ರೀಮತಿ ಪದ್ಮ, ಶ್ರೀಮತಿ ಪೂಜ ಹಾಗೂ ಶ್ರೀಮತಿ ರಾಜೇಶ್ವರಿ ಮತ್ತು ನವಜೀವನ ಸಮಿತಿಯ ಸರ್ವ ಸದಸ್ಯರು ಮತ್ತು ಅವರ ಕುಟುಂಬದವರು ಹಾಗೂ ಊರಿನವರು ಭಾಗವಹಿಸಿದ್ದರು.
