ಕೆ.ಆರ್. ನಗರ ಜಿಲ್ಲಾ ವ್ಯಾಪ್ತಿಯ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಗಾರ ಕಾರ್ಯಕ್ರಮ

Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಕೆ.ಆರ್.ನಗರ ಜಿಲ್ಲೆ ಕೆ.ಆರ್. ನಗರ ಜಿಲ್ಲಾ ವ್ಯಾಪ್ತಿಯ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಗಾರ ಕಾರ್ಯಕ್ರಮವು ಕೆ.ಆರ್ ನಗರ ಜಿಲ್ಲಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ಪಾಯಸ್ ರವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾಜದ ಯುವ ಪೀಳಿಗೆ, ದೇಶದ ಆಸ್ತಿಯಾಗಬೇಕಾದ ವಿದ್ಯಾರ್ಥಿಗಳು ಇಂದು ದುಷ್ಚಟಕ್ಕೆ ಬಲಿಯಾಗುತ್ತಿದ್ದು, ತಮ್ಮ ಜೀವನವನ್ನು ಹಾಳು ಮಾಡುಕೊಳ್ಳುತ್ತಿದ್ದಾರೆ. ಪರಮ ಪೂಜ್ಯ ಖಾವಂದರ ಆಶಯದಂತೆ ದುಷ್ಚಟಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಜನಜಾಗೃತಿ ಎಂಬ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತವಾಗಿ ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿ – ವಿದ್ಯಾರ್ಥಿನಿ ಮಿತ್ರರು ಅತೀ ಬೇಗ ದುಷ್ಟಟಕ್ಕೆ ಬಲಿಯಾಗುತ್ತಿದ್ದು, ಪ್ರತೀ ಶಾಲೆ,ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಎಂಬ ಕಾರ್ಯಕ್ರಮದ ಮೂಲಕ ಯಾವೆಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಜಾಗೃತಿ ಮೂಡಿಸಬೇಕು ಎನ್ನುವ ವಿಚಾರಗಳನ್ನು ತರಬೇತುದಾರರಿಗೆ ಮಾಹಿತಿ-ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀ ಹಂದನಳ್ಳಿ ಸೋಮಶೇಖರ್, ಜಿಲ್ಲಾ ಜನಜಾಗೃತಿ ಸದಸ್ಯರಾದ ಶ್ರೀ ಅಶ್ವತ್ ಕುಮಾರ್, ಜಿಲ್ಲಾ‌ ನಿರ್ದೇಶಕರಾದ ಶ್ರೀ ಮುರಳೀಧರ್ ಯೋಜನಾಧಿಕಾರಿಗಳಾದ ಶ್ರೀ ಯಶವಂತ್, ಶ್ರೀಮತಿ ಸರೋಜ, ಶ್ರೀ ಧನಂಜಯ್, ಶ್ರೀ ನಾರಾಯಣ ಶೆಟ್ಟಿ, ಶ್ರೀ ರಮೇಶ್, ಶ್ರೀ ಉಮೇಶ್, ಶ್ರೀ ಗಣಪತಿ ಭಟ್, ಜಿಲ್ಲಾ ವಿಚಕ್ಷಣಾಧಿಕಾರಿ ಶ್ರೀ ವಿಶ್ವನಾಥ್ ಹಾಗೂ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಶ್ರೀ ಮಾಧವ್ ನಾಯಕ್ ಮತ್ತು ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ಶ್ರೀ ವಸಂತ್ ಹಾಗೂ 18 ಜನ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರು ಉಪಸ್ಥಿತರಿದ್ದರು.