ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಕೆ.ಆರ್.ನಗರ ಜಿಲ್ಲೆ ಕೆ.ಆರ್. ನಗರ ಜಿಲ್ಲಾ ವ್ಯಾಪ್ತಿಯ ಕೆ.ಆರ್.ನಗರ, ಪಾಂಡವಪುರ, ಮೇಲುಕೋಟೆ, ಶ್ರೀರಂಗಪಟ್ಟಣ, ಸಾಲಿಗ್ರಾಮ, ಹುಣಸೂರು, ಚಿಕ್ಕಹುಣಸೂರು ತಾಲೂಕಿನ ನವಜೀವನ ಸಮಿತಿಯ ಪೋಷಕರುಗಳ ತರಬೇತಿ ಕಾರ್ಯಗಾರ ಕಾರ್ಯಕ್ರಮವು ಕೆ.ಆರ್ ನಗರ ಜಿಲ್ಲಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ಪಾಯಸ್ ರವರು ಅವರು ಉದ್ಘಾಟಿಸಿ ಕುಡಿತದಿಂದ ಜನಜೀವನಕ್ಕೆ ಆಗುತ್ತಿರುವ ಅನಾನಕೂಲಗಳು ಹಾಗೂ ನಷ್ಟಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಶ್ರೀ ಮುರಳೀಧರ್, ಯೋಜನಾಧಿಕಾರಿಗಳಾದ ಶ್ರೀ ಯಶವಂತ್, ಶ್ರೀಮತಿ ಸರೋಜ, ಶ್ರೀ ಧನಂಜಯ್, ಶ್ರೀ ನಾರಾಯಣ ಶೆಟ್ಟಿ, ಶ್ರೀ ರಮೇಶ್, ಶ್ರೀ ಉಮೇಶ್, ಶ್ರೀ ಗಣಪತಿ ಭಟ್, ಜಿಲ್ಲಾ ವಿಚಕ್ಷಣಾಧಿಕಾರಿ ಶ್ರೀ ವಿಶ್ವನಾಥ್ ಹಾಗೂ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಶ್ರೀ ಮಾಧವ್ ನಾಯಕ್ ಮತ್ತು ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ಶ್ರೀ ವಸಂತ್ ಹಾಗೂ, 46 ಜನ ಪೋಷಕರು ಉಪಸ್ಥಿತರಿದ್ದರು.
