ರಾಮನಗರ ಜಿಲ್ಲೆಯ ಹಾರೋಹಳ್ಳಿ, ಕನಕಪುರ, ರಾಮನಗರ, ಚೆನ್ನಪಟ್ಣ, ಕೆಂಗಲ್ ಹಾಗೂ ಮಾಗಡಿ ತಾಲೂಕಿನ ನವಜೀವನ ಸಮಿತಿಯ ಪೋಷಕರುಗಳ ತರಬೇತಿ ಕಾರ್ಯಗಾರ

Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಮನಗರ ಜಿಲ್ಲೆಯ ಹಾರೋಹಳ್ಳಿ, ಕನಕಪುರ, ರಾಮನಗರ,ಚೆನ್ನಪಟ್ಣ,ಕೆಂಗಲ್ ಹಾಗೂ ಮಾಗಡಿ ತಾಲೂಕಿನ ನವಜೀವನ ಸಮಿತಿಯ ಪೋಷಕರುಗಳ ತರಬೇತಿ ಕಾರ್ಯಗಾರ ಕಾರ್ಯಕ್ರಮವು ರಾಮನಗರ ಜಿಲ್ಲಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಚಿಕ್ಕಣ್ಣಯ್ಯ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ‌ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀಯುತ ಹರೀಶ್ ಕುಮಾರ್ ರವರು ವಹಿಸಿಕೊಂಡರು. ಜನಜಾಗೃತಿ ವೇದಿಕೆಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ಪಾಯಸ್ ರವರು ನವಜೀವನ ಸಮಿತಿಯ ಪೋಷಕರುಗಳಿಗೆ ಅವರವರ ಜವಾಬ್ಧಾರಿಗಳನ್ನು ವಿವರಿಸಿದರು.
ನವಜೀವನ ಸದಸ್ಯರ ಸಂಪರ್ಕ – ಅನುಪಾಲನೆ ಮಾಡುವುದು ಹೇಗೆ?, ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಹೇಗೆ, ಮತ್ತು ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಚಂದ್ರು, ಜಿಲ್ಲಾ‌ ನಿರ್ದೇಶಕರಾದ ಶ್ರೀ ಜಯಕರ ಶೆಟ್ಟಿ, ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಶ್ರೀ ಮಾಧವ್ ನಾಯಕ್,
MIS ಯೋಜನಾಧಿಕಾರಿಗಳಾದ ಶ್ರೀ ಅಶ್ವಿನ್, ರಾಮನಗರ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಮುರಳೀಧರ್ ಗೌಡ, ಜಿಲ್ಲಾ ಪ್ರಭಂದಕರಾದ ಶ್ರೀ ಉಮೇಶ್. ವಿ. ಮತ್ತು ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ಶ್ರೀ ವಸಂತ್ ಹಾಗೂ 54 ಜನ ಪೋಷಕರು ಉಪಸ್ಥಿತರಿದ್ದರು.