ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಸ್ವ ಉದ್ಯೋಗ ತರಬೇತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಧಾರವಾಡದ ರುಡ್ಸೆಟ್ ಸಂಸ್ಥೆಯಲ್ಲಿ ನವಜೀವನ ಸಮಿತಿಯ ಸದಸ್ಯರಿಗಾಗಿ ಹತ್ತು ದಿನಗಳ ಹೈನುಗಾರಿಕೆ ಮತ್ತು ಎರೆ ಗೊಬ್ಬರ ಹಾಗೂ ಕೋಳಿ ಸಾಕಣೆ ತರಬೇತಿ ಉದ್ಘಾಟನೆ ನಡೆಯಿತು.ರಾಜ್ಯದಲ್ಲಿ ಅತೀ ಹೆಚ್ಚು ನವಜೀವನ ಸಮಿತಿಯ ಸದಸ್ಯರಿಗೆ ಸ್ವ ಉದ್ಯೋಗ ತರಬೇತಿ ನೀಡಿದ ಕೀರ್ತಿ ಧಾರವಾಡದ ರುಡ್ಸೆಟ್ ಸಂಸ್ಥೆಗೆ ಸಲ್ಲುತ್ತದೆ ಎಂದು ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಬಣ್ಣಿಸಿ ನಿರ್ದೇಶಕರು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿ ತರಬೇತಿ ಉದ್ಘಾಟಿಸಿ ಆಗಮಿಸಿದ 20 ಮಂದಿ ನವಜೀವನ ಸಮಿತಿ ಸದಸ್ಯರಿಗೆ ಸಾಧನೆಗೆ ಪೂರಕವಾದ ಮಾಹಿತಿಯನ್ನು ಉದಾರಣೆಯ ಸಹಿತ ತಿಳಿಸಿ ತರಬೇತಿ ನಿರತರಿಗೆ ಯೋಜನೆಯಿಂದ ನೀಡುವ ಅನುದಾನಗಳ ಬಗ್ಗೆ ತಿಳಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಅಧ್ಯಕ್ಷರಾದ ರಾಜಣ್ಣ ಮೂ ಕೊರವಿಯವರು ಪೂಜ್ಯರ ಕನಸು ಅದನ್ನು ನನಸಾಗಲು ಪ್ರಯತ್ನಿಸಿರುವ ರೀತಿ ವರ್ಣಿಸಲು ಅಸಾಧ್ಯವೆಂದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಗವಿಸಿದ್ದಪ್ಪ ರವರು, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್, ಹಿರಿಯ ಉಪನ್ಯಾಸಕರಾದ ಚೆನ್ನಬಸವಪ್ಪ, ಬಸವರಾಜ್, ಮಹೇಶ್, ಮೇಲ್ವಿಚಾರಕ ಉಮೇಶ್ ಉಪಸ್ಥಿತರಿದ್ದರು.
