ಅಥಣಿ ಜಿಲ್ಲಾಮಟ್ಟದ ನವಜೀವನ ಪೋಷಕರ ತರಬೇತಿಯ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಅಥಣಿ ಜಿಲ್ಲಾಮಟ್ಟದ ನವಜೀವನ ಪೋಷಕರ ತರಬೇತಿಯ ಉದ್ಘಾಟನಾ ಕಾರ್ಯಕ್ರಮ
ಅಥಣಿ ಜಿಲ್ಲೆಯಲ್ಲಿ ಪ್ರಥಮವಾಗಿ ಈತನಕ ನಡೆದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನ ಮುಕ್ತರಾದವರನ್ನು ಒಟ್ಟು ಸೇರಿಸಿ ಅನುಪಾಲನೆ ಮತ್ತು ಸಭೆ ನಡೆಸುವ ಸಲುವಾಗಿ ಈ ದಿನ 30 ಮಂದಿಯ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ತರಬೇತಿಯ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸಂಜಯ್ ನಾಡ ಗೌಡ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಪೋಷಕರ ಜವಾಬ್ದಾರಿ, ನವಜೀವನ ಸಮಿತಿಯನ್ನು ರಚಿಸಲು ಕೈಗೊಳ್ಳಬೇಕಾದ ನಿಯಮಗಳು ತಾಲೂಕಿಗೆ ವಲಯಕ್ಕೊಂದು ನವಜೀವನ ಸಮಿತಿ ರಚಿಸಬೇಕೆನ್ನುವ ಗುರಿಗಳ ಬಗ್ಗೆ ತಿಳಿಸಿದರು. ಈ ಸಂದರ್ಭ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗ್ಡೆ, ಜಿಲ್ಲೆಯ ಜನಜಾಗೃತಿ ಯೋಜನಾಧಿಕಾರಿಗಳು, ಜನಜಾಗೃತಿ ಮೇಲ್ವಿಚಾರಕರು, ಜಿಲ್ಲಾ ಕಚೇರಿಯ ಪ್ರಬಂಧಕರು ಉಪಸ್ಥಿತರಿದ್ದರು.