ಶ್ರೀರಂಗಪಟ್ಟಣ ತಾಲೂಕು ಮಂಡ್ಯಕೊಪ್ಪಲು ವಲಯದ ಸುಧಾಮರಿಗೌಡ ಕಲ್ಯಾಣ ಮಂಟಪದಲ್ಲಿ 1778 ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ನಡೆಸಿದ್ದು ಶ್ರೀ ವೇದಬ್ರಹ್ಮ ಡಾ. ವಿ. ಭಾನುಪ್ರಕಾಶ್ ಶರ್ಮರವರು ದೀಪ ಬೆಳಗಿಸಿ 59 ಪಾನಮುಕ್ತ ಶಿಬಿರಾರ್ಥಿಗಳನ್ನು ಶುಭ ಹಾರೈಸಿದರು. ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕರು ಶಿಬಿರಾರ್ಥಿಗಳಿಗೆ ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳು ತಿಳಿಸುತ್ತಾ ಮಧ್ಯಪಾನದಿಂದ ಮುಕ್ತಿ ಹೊಂದಿ ಕುಟುಂಬದಲ್ಲಿ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ಇನ್ನು ಮುಂದೆ ಯಾವುದೇ ಕಾರಣಕ್ಕೂ ಇಂತಹ ದುಶ್ಚಟಕ್ಕೆ ಬಲಿಯಾಗಬೇಡಿ ಎಂದು ಕರೆ ನೀಡಿದರು. ಶ್ರೀ ಹಂದನಹಳ್ಳಿ ಸೋಮಶೇಖರ್ ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡರು, ಶ್ರೀ ಮುರಳೀಧರ್ ಎಚ್ ಎಲ್ ಜಿಲ್ಲಾ ನಿರ್ದೇಶಕರು, ಎಂ ಕೆ ಮಂಜುನಾಥ್ ಅಧ್ಯಕ್ಷರು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಶ್ರೀ ಮರಿಗೌಡ ಮಾಜಿ ಸದಸ್ಯರು ಜಿಲ್ಲಾ ಪಂಚಾಯಿತಿ ಅರಕೆರೆ, ಶ್ರೀ ಅಶ್ವತ್ ಕುಮಾರೇಗೌಡ ಅಪ್ಪಾಜಿ ಶೆಟ್ಟಿಹಳ್ಳಿ, ಶಿವಣ್ಣ ಚಂದಗಾಲು, ನಳಿನ, ಮಾಧವ ನಾಯಕ, ಸುಧಾ ಮರಿಗೌಡ, ಗಣಪತಿ ಭಟ್, ಸುಷ್ಮಾ ಮೇಲ್ವಿಚಾರಕಿ, ಸೇವಾ ಪ್ರತಿನಿಧಿಗಳು ನವ ಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
