ಬೆಳಗಾವಿ 1 ತಾಲೂಕಿನಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮದ್ಯವರ್ಜನ ಶಿಬಿರದ ಸಮಾರೋಪ ಬೆಳಗಾವಿ ಹೊನಗಾ:” ದುಷ್ಚಟ ಮುಕ್ತ ಸಮಾಜ ಕಟ್ಟುವಲ್ಲಿ ಸಮುದಾಯ ಒಟ್ಟುಗೂಡಿ ಕೆಲಸ ಮಾಡಿದಾಗ ಎಂತಾ ಕಠಿಣ ಕೆಲಸವನ್ನು ಸುಲಭ ಮಾಡಲು ಸಾಧ್ಯ ಈ ವ್ಯವಸ್ಥೆಯನ್ನು ಪೂಜ್ಯ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಮಾಡಿದ್ದಾರೆ, ವ್ಯಸನ ಮುಕ್ತ ಜೀವನದಿಂದ ಮನುಷ್ಯನಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ ಮತ್ತು ಅವರು ಮಾನಸಿಕ, ದೈಹಿಕ ಮತ್ತು ಆರ್ಥಿಕವಾಗಿ ಸುಧಾರಣೆಯಾಗಲು ಒಳ್ಳೆಯ ಅವಕಾಶ ಸಿಗುತ್ತದೆ ” ಎಂದು ವಿಜಯಾ ಅರ್ಥೋ ಮತ್ತು ಥರ್ಮೋ ಸಂಸ್ಥೆಯ ನಿರ್ದೇಶಕರಾದ ಡಾ| ರವಿ ಪಾಟೀಲ್ ರವರು ಹೇಳಿದರು. ತಾಲ್ಲೂಕಿನ ಹೊನಗಾ ಗ್ರಾಮದ ಡಾ| ರವಿ ಪಾಟೀಲ್ ಆಯುರ್ವೇದಿಕ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಹೊನಗಾದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳಗಾವಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ 1770 ನೇ ಮದ್ಯವರ್ಜನ ಶಿಬಿರದಲ್ಲಿ 70 ಜನ ಶಿಬಿರಾರ್ಥಿಗಳಿಗೆ ಮದ್ಯಮುಕ್ತರನ್ನಾಗಿಸಲು 8 ದಿನಗಳ ತರಬೇತಿಯನ್ನು ನಡೆಸಿ ಸುಮಾರು 400 ಜನರಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಯಿತು ಇದುವರೆಗೂ 1.48 ಲಕ್ಷ ಜನರಿಗೆ ಶಿಬಿರದ ಮೂಲಕ ನೆಮ್ಮದಿ ಜೀವನ ನಡೆಸಲು ಸಾಧ್ಯವಾಯಿತು ಎಂದು ಜನಜಾಗೃತಿ ರಾಜ್ಯಾಧ್ಯಕ್ಷರಾದ ರಾಜಣ್ಣ ಕೊರವಿಯವರು ತಿಳಿಸಿದರು. ಮದ್ಯ- ಮಾದಕಗಳಿಂದ ದೂರವಾದರೆ ಸಮಾಜದಲ್ಲಿ ಶಾಂತಿ ನೆಲೆಸಲಿದೆ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಮದ್ಯವರ್ಜನ ಶಿಬಿರ ಆಯೋಜಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಲ್ಲಗೌಡಾ ಪಾಟೀಲ್ ರವರು ತಿಳಿಸಿದರು. ಮದ್ಯವೇಸನದಿಂದ ಇಡೀ ಕುಟುಂಬದ ಜೀವನ ನರಕ ಇದರಿಂದ ಮುಕ್ತರಾದ ನೀವು ಪುಣ್ಯವಂತರು ಎಂದು ತಿಳಿಸಿದರು. ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ್ ಅವರು ಮಾತನಾಡಿ, “ದೇಶದ ಆರ್ಥಿಕ ಪ್ರಗತಿಗೆ ವ್ಯಸನ ಮುಕ್ತ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ವಾಗಬೇಕಿದೆ. ಆ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ವಿವಿಧ ಯೋಜನಾ ಕಾರ್ಯಗಳು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಿವ ಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಶಿಬಿರಾರ್ಥಿಗಳಿಗೆ ಆಶೀರ್ವಚನ ನೀಡಿದರು