ಭದ್ರಾವತಿ-2 ತಾಲೂಕಿನಲ್ಲಿ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಭದ್ರಾವತಿ-2 ತಾಲೂಕಿನ ನಾಗತಿಬೆಳಗಳು ವಲಯದ ಭದ್ರ ಕಾಲೋನಿಯ ಶ್ರೀರಾಮೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ನವಜೀವನ ಸಮಿತಿಯ ಮಾಸಿಕ ಸಭೆ ಹಾಗೂ ನವಜೀವನೋತ್ಸವ ಕಾರ್ಯಕ್ರಮವನ್ನು ಸ್ಥಳೀಯ ದಾನಿಗಳು ಹಾಗೂ ಸಂತೋಷ್ ರೈಸ್ ಮಿಲ್ ನ ಅಧ್ಯಕ್ಷರಾದ ಶ್ರೀ ಸುಧಾಕರ್ ಶೆಟ್ಟಿ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧ್ಯವರ್ಜನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಎಂಎಲ್ ಯಶೋಧರಯ್ಯ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀರಾಮೇಶ್ವರ ಕಲ್ಯಾಣ ಮಂಟಪದ ಅಧ್ಯಕ್ಷರಾದ ಶ್ರೀ ರಮೇಶ್ ರವರು, ಶಿವಮೊಗ್ಗ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಕರುಣ ಮೂರ್ತಿಯವರು, ಜಯರಾಮ ಗೊಂದಿ ಅವರು ಹಾಗೂ ಶ್ರೀಮತಿ ಪಾರ್ವತಮ್ಮ, ರವರು ಮಧ್ಯವರ್ಜನ ಶಿಬಿರದ ಕೋಶಾಧಿಕಾರಿಯಾದ ಶ್ರೀ ಮಹೇಶ್ ರವರು ಹಾಗೂ ರಾಜು ರೇವಣಕರ್ ಭದ್ರಾವತಿ ತಾಲೂಕು ಯೋಜನಾಧಿಕಾರಿಯ ಆದ ಮಾಧವರವರು ಹಾಗೂ ಚಿತ್ರದುರ್ಗ ಪ್ರಾದೇಶಿಕ ಕಚೇರಿಯ ಜನಜಾಗೃತಿ ವೇದಿಕೆ ಯೋಜನಾಧಿಕಾರಿಯಾದ ಶ್ರೀ ನಾಗರಾಜ ರವರು, ಒಕ್ಕೂಟದ ಅಧ್ಯಕ್ಷರುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.