ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾಂಡವಪುರ ತಾಲೂಕಿನ ಎಲೆಕೆರೆ ವಲಯದ ಎಲೆಕೆರೆ ಗ್ರಾಮದಲ್ಲಿ ನವಜೀವನೋತ್ಸವ ಮತ್ತು ಮಂಜುನಾಥ ಸ್ವಾಮಿಗೆ ಸಹಸ್ರ ಬಿಲ್ವಾರ್ಚನೆ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು MDCC Bank ನಿರ್ದೇಶಕರಾದ ಪಿ ಚೆಲುವರಾಜ್ ರವರು ನೆರವೇರಿಸಿದರು ಹಾಗೂ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ನಿರ್ದೇಶಕರಾದ ಎಚ್ ಎಲ್ ಮುರುಳಿಧರ್ ಸರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ಯೋಜನಾಧಿಕಾರಿಗಳಾದ ಮಾಧವ ನಾಯಕ್ ರವರು ಬಿಲ್ವಾರ್ಚನೆಯ ಮಹತ್ವ ಜೀವನ ಸಮಿತಿ ಸದಸ್ಯರ ಜವಾಬ್ದಾರಿ ಬಗ್ಗೆ ಮತ್ತು ಜನಜಾಗೃತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು ಕ್ಷೇತ್ರ ಯೋಜನಾಧಿಕಾರಿ ಗಳಾದ ಯಶವಂತ್ ರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ನಡೆಸಿಕೊಟ್ಟರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯರುಗಳಾದ ಧನ್ಯ ಕುಮಾರ್ ಪ್ರಭಾಕರ್ ಮಹಾದೇವ ಉಮಾ ಬಸವರಾಜ್ ಹಾಗೂ ಶಾಂತಲಾ ರಾಮಕೃಷ್ಣೇಗೌಡ ಪ್ರಗತಿ ಬಂದು ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷರು ಗಳಾದ ವಿನುತಾ ರುಕ್ಮಿಣಿ ವಲಯದ ಮೇಲ್ವಿಚಾರಕರು ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಮತ್ತು ಧನಂಜಯ ವಿ ಜೆ ಅಧ್ಯಕ್ಷರ ನವಜೀವನ ಸಮಿತಿ ಪಾಂಡವಪುರ ಮತ್ತು ಎಲೆಕೆರೆ ಹಾಗೂ ಡಮಡಹಳ್ಳಿ ಮುಖಂಡರುಗಳ ಉಪಸ್ಥಿತರಿದ್ದರು
