ಕೊಪ್ಪಳ ಪ್ರಾದೇಶಿಕ ವಿಭಾಗದ ಕೊಪ್ಪಳ ಜಿಲ್ಲೆಯ ಕೊಪ್ಪಳ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ ಕೊಪ್ಪಳ ತಾಲೂಕು ಯೋಜನಾ ಕಚೇರಿಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಕ್ರಿಯಾ ಯೋಜನೆಯ ಅನುಷ್ಠಾನದ ಬಗ್ಗೆ ಸಮಗ್ರ ಚರ್ಚೆ ನಡೆಸಲಾಯಿತು, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಅರ್ಧವಾರ್ಷಿಕ ಸಾಧನೆಯ ವಿಮರ್ಶೆ, ಶತದಿನೋತ್ಸವ ಕಾರ್ಯಕ್ರಮ, ರಾಜ್ಯ ವೇದಿಕೆ ಮಹಾಸಭೆ, ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಶ್ರೀ ಕ್ಷೇತ್ರ ಭೇಟಿಯ ಬಗ್ಗೆ, ನವ ಜೀವನೋತ್ಸವ ಕಾರ್ಯಕ್ರಮ ಹಾಗೂ ಜಿಲ್ಲಾ ಮಟ್ಟದ ಪೋಷಕರ ತರಬೇತಿ ಬಗ್ಗೆ ಸಮಗ್ರ ಚರ್ಚೆಯನ್ನು ಶ್ರೀ ಜನಾರ್ದನ್ ಹುಲಿಗಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ, ಶ್ರೀ ದೇವೇಂದ್ರಪ್ಪ ಬಲೂಟಗಿ, ನಿರ್ದೇಶಕರಾದ ಶ್ರೀ ಸದಾನಂದ ಬಂಗೇರ್, ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಕೊಪ್ಪಳ ಪೂರ್ವ ಮತ್ತು ಪಶ್ಚಿಮ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಜನಜಾಗೃತಿ ಯೋಜನಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲಾಯಿತು.
