ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಕಾಪು ತಾಲೂಕು ಇದರ ಅಂಗ ಸಂಸ್ಥೆಯಾಗಿ ನೂತನವಾಗಿ ಅಖಿಲ ಕರ್ನಾಟಕ ಜನಜಾಗೃತಿ ತಾಲೂಕು ವೇದಿಕೆ ಕಾಪು ಇದರ ಉದ್ಘಾಟನೆಯನ್ನು ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರದ ಶ್ರೀ ವಿವೇಕ್ ವಿ.ಪಾಯಸ್ ರವರು ನೆರೆವೇರಿಸಿದರು. ಉಡುಪಿ ತಾಲೂಕು ವೇದಿಕೆಯ ಅಧ್ಯಕ್ಷರಾದ ಶ್ರೀ ಸತ್ಯಾನಂದ ನಾಯಕ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ದೇವದಾಸ್ ಹೆಬ್ಬಾರ್, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ನವೀನ್ ಅಮಿನ್, ಜನಜಾಗೃತಿ ಆಡಳಿತ ಯೋಜನಾಧಿಕಾರಿ ಮೋಹನ್ ಕೆ ಉಪಸ್ಥಿತರಿದ್ದರು. ತಾಲೂಕು ವೇದಿಕೆಯ ಕಾರ್ಯವೈಖರಿಗಳ ಬಗ್ಗೆ, ದ್ಯೇಯ ಉದ್ದೇಶಗಳ ಬಗ್ಗೆ ಮತ್ತು ತಾಲೂಕು ವೇದಿಕೆಯ ರಚನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರಾದೇಶಿಕ ನಿರ್ದೇಶಕರು ನೀಡಿ ಜನಜಾಗೃತಿ ತಾಲೂಕು ವೇದಿಕೆಯನ್ನು ರಚಿಸಿದರು. ತಾಲೂಕು ವೇದಿಕೆಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಶ್ರೀ ದಯಾನಂದ ಹೆಜಮಾಡಿಯವರು ಆಯ್ಕೆಯಾದರು. 6 ವಲಯಗಳಿಂದ ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು.
