ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ರೋಣ ಗಜೇಂದ್ರಗಡ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, 1759ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ರೋಣ ಗಜೇಂದ್ರಗಡ, ಪುರಸಭೆ ಗಜೇಂದ್ರಗಡ, ಪ್ರಾಥಮಿಕ ಆರೋಗ್ಯ ಕೇಂದ್ರ ಗಜೇಂದ್ರಗಡ, ಆರಕ್ಷಕ ಠಾಣೆ ಗಜೇಂದ್ರಗಡ, ಜಿಲ್ಲಾ ಜನಜಾಗೃತಿ ವೇದಿಕೆ ಗದಗ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಗಜೇಂದ್ರಗಡ ವಲಯ, ಶ್ರೀ ಸೇವಾಲಾಲ ಸೇವಾ ಟ್ರಸ್ಟ್ ಗಜೇಂದ್ರಗಡ, ನವಜೀವನ ಸಮಿತಿ ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕ ವಿವಿಧ ಸಂಘ ಸಂಸ್ಥೆಗಳ ಸಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ| ಹೇಮಾವತಿ ವಿ.ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಗಜೇಂದ್ರಗಡದ ಶ್ರೀ ಸೇವಾಲಾಲ ಕಲ್ಯಾಣ ಮಂಟಪದಲ್ಲಿ 1759ನೇ ಮದ್ಯವರ್ಜನ ಶಿಬಿರ ಉದ್ಘಾಟನೆಗೊಂಡಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅಶೋಕ ಬಾಗಮಾರ ಅಧ್ಯಕ್ಷರು ಶ್ರೀ ಭಗವಾನ್ ಮಹಾವೀರ ಆಯುರ್ವೇದ ಕಾಲೇಜು ಗಜೇಂದ್ರಗಡ ಇವರು ನೆರವೇರಿಸಿ ಉದ್ಘಾಟಕರ ಮಾತಗಳನ್ನಾಡಿದರು. ಶ್ರೀ ಶರಣಪ್ಪ ರೇವಡಿ ಅಧ್ಯಕ್ಷರು 1759ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗಜೇಂದ್ರಗಡ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ಮಾತುಗಳೊಂದಿಗೆ ಶುಭವನ್ನು ಕೋರಿದರು. ಶ್ರೀ ನಾಗೇಶ್ ವೈ.ಎ ಯೋಜನಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಪ್ಪಳ ಪ್ರಾದೇಶಿಕ ವಿಭಾಗ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ಯೋಗೇಶ್ ಎ ಇವರು ಮಾತನಾಡಿ ಸಂಸ್ಥೆಯ ಹುಟ್ಟು, ಬೆಳವಣಿಗೆ, ನಡೆದು ಬಂದ ದಾರಿ ಅಭಿವೃದ್ಧಿಯ ಪಥ ಮತ್ತು ಸಾಧನೆಯ ಪರಿಚಯದೊಂದಿಗೆ ಶುಭಾಶಯವನ್ನು ಕೋರಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಡಾ| ಅನಿಲ್ ಕುಮಾರ್ ತೋಟದ ಮಕ್ಕಳ ತಜ್ಞರು ಹಾಗೂ ಆಡಳಿತಾಧಿಕಾರಿ ತಾಲೂಕು ಆಸ್ಪತ್ರೆ ಗಜೇಂದ್ರಗಡ, ಶ್ರೀ ಚಂದ್ರಶೇಖರ ಹುಣಸಿಕಟ್ಟಿ ಉಪಾಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಗದಗ, ಶ್ರೀ ಜಗದೀಶ್ ಕರಡಿ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಗದಗ, ಶ್ರೀ ರಾಜು ಸಾಂಗ್ಲೀಕರ ಉಪಾಧ್ಯಕ್ಷರು 1759ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗಜೇಂದ್ರಗಡ, ಶ್ರೀ ಬಾಳೋಜಿರಾವ್ ಬೋಸಲೆ ಗೌರವ ಸಲಹೆಗಾರರು 1759ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗಜೇಂದ್ರಗಡ ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.ಕಾರ್ಯಕ್ರಮದಲ್ಲಿ ಶ್ರೀ ನಂದಕುಮಾರ್ ಪಿ ಪಿ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಶ್ರೀಮತಿ ಪಿಲೋಮಿನಾ ಡಿಸೋಜಾ ಆರೋಗ್ಯ ಸಹಾಯಕಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವರು ಉಪಸ್ಥಿತರಿದ್ದರು.
