ಚಿಕ್ಕಹುಣಸೂರು ಯೋಜನಾ ಕಛೇರಿ ವ್ಯಾಪ್ತಿಯ ಬಿಳಿಕೆರೆ ವಲಯದ ಕೊಮ್ಮೆಗೌಡನಕೊಪ್ಪಲು ಕಾರ್ಯಕ್ಷೇತ್ರದಲ್ಲಿ ನವಜೀವನೋತ್ಸವ ಪ್ರಯುಕ್ತ ಸಹಸ್ರ ಬಿಲ್ವಾರ್ಚನೆ, ಮತ್ತು ಸಾಧನ ಸಮಾವೇಶ ನಡೆಯಿತು.ಕಾರ್ಯಕ್ರಮವನ್ನು ಹುಣಸೂರು ತಾಲೂಕಿನ ಮಾನ್ಯ ಶಾಸಕರು G D ಹರೀಶ್ ಗೌಡರು ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಕ್ಕಿನ ಕಂತೆ ಮಠದ ಶ್ರೀ ಶ್ರೀ ಸಾಂಬಾ ಸದಾಶಿವ ಸ್ವಾಮಿಗಳು ಆಶೀರ್ವಾಚನ ನೀಡಿದರು.ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ಅಧ್ಯಕ್ಷರು ಹಂದನಹಳ್ಳಿ ಸೋಮಶೇಖರ್ ಕೆ.ಎಂ.ಎಫ್ ನಿರ್ದೇಶಕರು ಕೆ.ಎಸ್ ಕುಮಾರ್ ಹಾಗೂ ಊರಿನ ಗಣ್ಯರಾದ ವೆಂಕಟೇಶ ಗೌಡ್ರು, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಬಿಳಿಕೆರೆ ಪ್ರಸನ್ನ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೃತಿ ಮತ್ತು ಗಾಯತ್ರಮ್ಮ ರವರು, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಮಾಧವ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಚಿಕ್ಕ ಹುಣಸೂರು ಯೋಜನಾಧಿಕಾರಿಯದ ಧನಂಜಯ್ ರವರ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಯಾದ ಧನಂಜಯ್, ವಲಯ ಮೇಲ್ವಿಚಾರಕರಾದ ವೀಣಾ, ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ವಸಂತ್, ನವಜೀವನ ಸಮಿತಿ ತಾಲೂಕು ಅಧ್ಯಕ್ಷರದ ಕೃಷ್ಣ ಗೌಡರು, ಪದಾಧಿಕಾರಿಗಳದ ಚಂದ್ರು, ಒಕ್ಕೂಟದ ಅಧ್ಯಕ್ಷರು ಮಂಜುಳಮ್ಮ, ಸೇವಾಪ್ರತಿನಿಧಿಗಳಾದ ಪದ್ಮ, ಕುಮಾರಿ, ನವಜೀವನ ಸಮಿತಿ ಸದಸ್ಯರು, ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಲಾಯಿತು.
