ಕಡಬದಲ್ಲಿ ಸ್ವಾಸ್ಥ್ಶಸಂಕಲ್ಪ ಸಪ್ತಾಹ ಸಮರೋಪ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಡಬ ತಾಲೂಕು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಪ್ರತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಕಡಬ ಇವರ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಸ್ವಾಸ್ಥ್ಶಸಂಕಲ್ಪ ಸಪ್ತಾಹ ಸಮಾರೋಪ ಹಾಗೂ ರಾಜ್ಶಮಟ್ಟದ ಜನಜಾಗೃತಿ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆಯು ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜು ನೆಲ್ಶಾಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿದ ಕಾಲೇಜು ಪ್ರಾಂಶುಪಾಲರಾದ ರೆ|ಫಾ| ಥೋಮಸ್ ಬಿಜಿಲಿ ಓ.ಐ.ಸಿ ಯವರು ಮಾತನಾಡಿ.ವಿಧ್ಶಾರ್ಥಿ ಜೀವನವನ್ನು ಆನಂದದಿಂದ ಅನುಭವಿಸುವ ಸಂದರ್ಭ ಸಹಪಾಟಿಗಳ ಸಹವಾಸದೊಷದಿಂದ ದುಷ್ಚಟದ ದಾಸರಾದಲ್ಲಿ ಆನಂದ ಜೀವನ ನಾಶವಾಗಿ ಬದುಕಿನುದ್ದಕ್ಕೂ ನಷ್ಟಪಡುವ ಬದುಕು ನಡೆಸಬಾರದು. ಧರ್ಮಸ್ಥಳದಂತಹ ಸಂಸ್ಥೆಯ ಸಹಬಾಗಿತ್ವದಲ್ಲಿ ನಡೆಯುವ ಪರಿವರ್ತನಾ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸಿ ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದರು.ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣವನ್ನು ನಡೆಸಿಕೊಟ್ಟ ಜನಜಾಗೃತಿ ರಾಜ್ಶ ಕಾರ್ಯದರ್ಶಿಗಳು ಪ್ರಾದೇಶಿಕ ನಿರ್ಧೇಶಕರು ವಿವೇಕ್ ವಿನ್ಸಂಟ್ ಪಾಯಸ್ ಮಾತನಾಡಿ ವಿಧ್ಶಾರ್ಥಿಗಳು ದೇಶದ ಆಸ್ತಿ ವಿದ್ಯಾರ್ಥಿ ಜೀವನ ನಮಗೆ ನಮ್ಮ ಹಿರಿಯರು ನೀಡಿದ ಸಂತಸದ ಕ್ಷಣ ದುಷ್ಚಟ ದುರಭ್ಶಾಸಗಳ ದಾಸರಾದರೆ ನಮ್ಮ ಹೆತ್ತವರ ನಿರೀಕ್ಷೆಗಳನ್ನು ಹಾಳುಮಾಡುವುದರೊಂದಿಗೆ ನಮ್ಮ ಆಯಸ್ಸನ್ನೂ ಕಡಿಮೆ ಮಾಡಿಕೊಳ್ಳುವಂತಾಗುತ್ತದೆ. ಉತ್ತಮ ನಾಗರೀಕನಾಗಿ ಸಮಾಜದಲ್ಲಿ ಅತ್ಶುನ್ನತ ಸ್ಥಾನ ಪಡೆಯುವಲ್ಲಿ ವಿಧ್ಶಾರ್ಥಿಗಳೆಲ್ಲರೂ ಸಫಲತೆ ಕಾಣಲಿ ಎಂದರು. ಜನಜಾಗೃತಿ ವೇಧಿಕೆ ಕಡಬ ತಾಲೂಕು ವತಿಯಿಂದ ನಡೆಲ್ಪಟ್ಟ ಪ್ರೌಡಶಾಲೆ ಕಾಲೇಜು ಹಾಗೂ ಸಾರ್ವಜನಿಕ ರಿಗೆ ಜನಜಾಗೃತಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ನಿರ್ಣಯಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.ಕಾರ್ಯಕ್ರಮದ ಅಧ್ಶಕ್ಷತೆಯನ್ನು ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಶಕ್ಷರು ಮಹೇಶ್ ಕೆ ಸವಣೂರು ವಕೀಲರು ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ಅಧ್ಶಕ್ಷ ಪದ್ಮನಾಭ ಶೆಟ್ಟಿ, ಜಿಲ್ಲಾ ನಿರ್ಧೇಶಕರು ಪ್ರವೀಣ್ ಕುಮಾರ್, ಉಪ ಪ್ರಾಂಶುಪಾಲರು ಜೋಸ್ ಎಂ ಜೆ, ಕೇಂದ್ರ ಒಕ್ಕೂಟ ಸಮಿತಿ ಅಧ್ಶಕ್ಷರು ಸಂತೋಷ್ ಕೆ, ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾದ್ಶಕ್ಷರು ಬಾಲಕೃಷ್ಣ ಗೌಡ, ಕೊಯಿಲಾ ನೆಲ್ಶಾಡಿ ವಲಯ ಜನಜಾಗೃತಿ ಅಧ್ಶಕ್ಷರು ಜಯಾನಂದ ಬಂಟ್ರಿಯಾಲ್, ಪ್ರಗತಿಬಂಧು ಒಕ್ಕೂಟದ ನೆಲ್ಶಾಡಿ ವಲಯಾಧ್ಶಕ್ಷರು ಕುಶಾಲಪ್ಪ ಕೆ ಹಾಗೂ ತಾಲೂಕು ಜನಜಾಗೃತಿ ವೇದಿಕೆ ಪಧಾದಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಯನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನೆಲ್ಶಾಡಿ ವಲಯ ಮೇಲ್ವೀಚಾರಕ ವಿಜೇಶ್ ಜೈನ್ ಧನ್ಶವಾದ ಮಾಡಿದರು. ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಸಾಧಕರ ಸನ್ಮಾನ ಪತ್ರ ವಾಚಿಸಿದರು. ಜನಜಾಗೃತಿ ವೇಧಿಕೆ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.ಜ್ಞಾನೋದಯ ಬೇಥನಿ ಪದವಿಪೂರ್ವ ಕಾಲೇಜು ಉಪನ್ಶಾಸಕರು ನೆಲ್ಶಾಡಿ ವಲಯದ ಸೇವಾಪ್ರತಿನಿಧಿಗಳು ಹಾಗೂ ತಾಲೂಕು ಕೃಷಿಮೇಲ್ವೀಚಾರಕ ಸೋಮೇಶ್ ಬಿಳಿನೆಲೆ ವಲಯ ಮೇಲ್ವೀಚಾರಕ ಆನಂದ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. 319ವಿಧ್ಶಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.