ಗೋಕಾಕ ಜಿಲ್ಲಾ ಮಟ್ಟದ ನವಜೀವನ ಪೋಷಕರ ಸಭೆಯನ್ನು ಗೋಕಾಕ ಜಿಲ್ಲಾ ನಿರ್ದೇಶಕರಾದ ಲವಕುಮಾರ ರವರು ಉದ್ಘಾಟಿಸಿ, ಪೂಜ್ಯರ ರಾಮ ರಾಜ್ಯದ ಕನಸು, ಜನಜಾಗೃತಿ ಕಾರ್ಯಕ್ರಮ, ನವಜೀವನ ಸದಸ್ಯರ ಸಂಘಟನೆ, ನವಜೀವನ ಸದಸ್ಯರ ಸಭೆ, ನವಜೀವನ ಸದಸ್ಯರ ಮನೆಭೇಟಿ, ನವಜೀವನ ಸದಸ್ಯರ ನಿರಂತರ ಒಳಿತಿಗಾಗಿ ಪೋಷಕರು ಉತ್ತಮ ಸೇವೆಯನ್ನು ನೀಡುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿಗಳಾದ ಭಾಸ್ಕರ್ ರವರು ನವಜೀವನ ಸದಸ್ಯರ ಮನೆಭೇಟಿ, ಸಂಘಟನೆ, ನವಜೀವನ ಸದಸ್ಯರ ವಾರದ ಪೂಜೆ & ಸಭೆ, ಪೂಜಾಕ್ರಮ, ಉಜಿರೆಯ ವ್ಯಸನ ಮುಕ್ತಿ ಕೇಂದ್ರದಲ್ಲಿ ನಡೆಯುವ ವಿಶೇಷ ಮದ್ಯವರ್ಜನ ಶಿಬಿರಗಳ ಬಗ್ಗೆ, ಫ್ರೀ ಕಾನ್ಫರೆನ್ಸ್ ಸಭೆಯ ಬಗ್ಗೆ, ನವಜೀವನ ಸದಸ್ಯರ ಸ್ವ ಉದ್ಯೋಗ ತರಬೇತಿಯ ಬಗ್ಗೆ, ವಾರದ ಸಭೆಯ ರಜಿಸ್ತ್ರಿ ನಿರ್ವಹಣೆ, ಹಾಜರಾತಿ, ಕಛೇರಿಗೆ ನೀಡುವ ವರದಿ, ಚದುರಿ ಹೋದ ಹಳೆಯ ನವಜೀವನ ಸದಸ್ಯರ ಪುನರ್ ಸಂಘಟಿಸಿ, ತಿಂಗಳ ಸಭೆ ನಡೆಸುವ ಬಗ್ಗೆ ತರಬೇತಿಯನ್ನು ನೀಡಿದರು.
