ಮೂಡಲಗಿ ತಾಲೂಕು ತುಕ್ಕಾನಟ್ಟಿಯಲ್ಲಿ 1751ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಮೂಡಲಗಿ ತಾಲೂಕು ತುಕ್ಕಾನಟ್ಟಿಯಲ್ಲಿ 1751ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಗಾಯತ್ರಿ ಪೀಠದ ಶ್ರೀ ಅಮೋಘ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಾಗನೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿವಲಿಂಗ ಹಿರೇಮಠದ ಶ್ರೀ ಮಾತೋಶ್ರೀ ಕಾವ್ಯಶ್ರೀ ಅಮ್ಮನವರು, ಶ್ರೀ ಕರಿಶಿದ್ದೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಮಾರುತಿ ತುಕಾನಟ್ಟಿ, ತುಕಾನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಕ್ಕವ್ವ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹನುಮಂತ್ ಹುಲಕುಂದ, ಅಥಣಿ ಜಿಲ್ಲಾ ಜನಜಾಗೃತಿ ಸದಸ್ಯ ಭರಮಣ್ಣ ಉಪ್ಪಾರ, ಅಥಣಿ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗಡೆ, ಭಗಿರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಪರಸಪ್ಪ ಬಬಲಿ, ಗ್ರಾಮ ಲೆಕ್ಕಾಧಿಕಾರಿ ಎಫ್ ಎಚ್ ಪತ್ತೆಖಾನ್, ತಾಲೂಕು ಕ್ಷೇತ್ರ ಯೋಜನಾಧಿಕಾರಿ ರಾಜು ನಾಯಕ್, ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ ಏನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭರಮಪ್ಪ ಹರಿಜನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎ ವಿ ಗಿರಿಯನ್ನವರ, ಪಶು ವೈದ್ಯಧಿಕಾರಿಗಳು ನೀಲಕಂಠ ಕಪ್ಪಲ್ಗುದ್ದಿ, ಶಿಬಿರಾಧಿಕಾರಿ ವಿದ್ಯಾಧರ್, ಆರೋಗ್ಯ ಸಹಾಯಕಿ ರಂಜಿತಾ, ಜನಜಾಗೃತಿ ಮೇಲ್ವಿಚಾರಕ ಉಮೇಶ, ಎಲ್ಲ ನವಜೀವನ ಸದಸ್ಯರು ಉಪಸ್ಥಿತರಿದ್ದರು.