1750 ನೇ ಮಧ್ಯವರ್ಜನ ಶಿಬಿರವು ಜಗಳೂರು ಜಿಲ್ಲೆಯ ನಾಯಕನಹಟ್ಟಿ ತಾಲೂಕಿನ ಶ್ರೀ ಏಕಾಂತೇಶ್ವರ ಮಠದ ಸಮುದಾಯ ಭವನದಲ್ಲಿ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಅಧ್ಯಕ್ಷತೆಯನ್ನು ಚಳ್ಳಕೆರೆ ವಕೀಲರ ಸಂಘದ ಅಧ್ಯಕ್ಷರು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಆದ ಕೆ ಎಂ ನಾಗರಾಜ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಗಳೂರು ಜಿಲ್ಲಾ ನಿರ್ದೇಶಕರಾದ ಜನಾರ್ದನ ಎಸ್, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಕುಮಾರ್ ಎಂ, ನಾಯಕನಹಟ್ಟಿ ಆರಕ್ಷಕ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಶ್ರೀ ದೇವರಾಜ್, ಚಿತ್ರದುರ್ಗ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷರಾದ ಕೆ ಎಂ ತಿಪ್ಪೇಸ್ವಾಮಿ, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ ಎಂ ಶಿವಸ್ವಾಮಿ, ಜಗಳೂರು ಜಿಲ್ಲಾ ಜನಜಾಗೃತಿ ಸದಸ್ಯರಾದ ಧನಂಜಯ್ ಮತ್ತು ಶ್ರೀಮತಿ ಶ್ವೇತಾ ರವಿಕುಮಾರ್ ಉಪಸ್ಥಿತರಿದ್ದು. ಶುಭ ಹಾರೈಸಿರುತ್ತಾರೆ. ಪ್ರಾಸ್ತಾವಿಕ ನುಡಿಗಳನ್ನು ಚಿತ್ರದುರ್ಗ ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿಗಳ ನಾಗರಾಜ್ ಸರ್ ಅವರು ಮಾತನಾಡಿದ್ದು ಅತಿಥಿಗಳ ಸ್ವಾಗತವನ್ನು ಕ್ಷೇತ್ರ ಯೋಜನಾಧಿಕಾರಿಗಳಾದ ಅಣ್ಣಪ್ಪ ಪಿಎಸ್, ಧನ್ಯವಾದವನ್ನು ನಾಯಕನಹಟ್ಟಿ ಮೇಲ್ವಿಚಾರಕರಾದ ಸಂತೋಷ್ ಎಸ್ ನಡೆಸಿ ಕೊಟ್ಟಿರುತ್ತಾರೆ.
