ಚಿಕ್ಕೋಡಿ ತಾಲೂಕಿನಲ್ಲಿ ನಡೆಯುತ್ತಿರುವ 1749ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದ ಮಲ್ಲಿಕಾರ್ಜುನ ಸಭಾಭವನದಲ್ಲಿ ನಡೆಯುತ್ತಿರುವ 1749ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಕಬ್ಬೂರು ಗ್ರಾಮದ ಗೌರಿಶಂಕರ ಮಠದ ಶ್ರೀ ಷ.ಬ್ರ.ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು. ಸಭೆಯಲ್ಲಿ ವೇದಮೂರ್ತಿ ಶ್ರೀ ಶಂಕರಯ್ಯ ಮಠದ, ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶಿವಪ್ಪ ಹುದ್ದಾರ, ರಮೇಶ ಬೆಲ್ಲದ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀ ಮಹಾನಿಂಗ ಪ್ರಭು, ಮಹಾಂತೇಶ ಶಿರಗೂರು, ಶ್ರೀ ಶೈಲ ತೇರದಾಳ, ಕಬ್ಬುರು ಉಪಠಾಣೆ ಏ.ಎಸ್.ಐ. ಶ್ರೀ ಸೋಮಶೇಖರ್ ಮಠಪತಿ, ಬಾಳೇಶ ಕುಕನೂರು, ಚಿಕ್ಕೋಡಿ ತಾಲೂಕು ಯೋಜನಾಧಿಕಾರಿ ನಾಮದೇವ ದೇಶಪಾಂಡೆ, ಚಿಕ್ಕೋಡಿ-2 ತಾಲೂಕು ಯೋಜನಾಧಿಕಾರಿ ಹರೀಶ ಈಶ್ವರ, ಶಿಬಿರಾಧಿಕಾರಿ ದಿನೇಶ ಮರಾಠಿ, ಆರೋಗ್ಯ ಸಹಾಯಕಿ ಫಿಲೋಮೀನ್ ಡಿಸೋಜ, ವಲಯದ ಮೇಲ್ವಿಚಾರಕ ಮಹಾಂತೇಶ, ಚಿಕ್ಕೋಡಿ 1 ತಾಲೂಕಿನ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ಕಬ್ಬುರು ವಲಯದ ಸೇವಾಪ್ರತಿನಿಧಿಗಳು, ಹುಕ್ಕೇರಿ, ಮೂಡಲಗಿ, ಗೋಕಾಕ ತಾಲೂಕಿನ ನವಜೀವನ ಸದಸ್ಯರು ಉಪಸ್ಥಿತರಿದ್ದರು.