ಚಿಕ್ಕೋಡಿಯ ಶ್ರೀ ನಾಗಲಿಂಗೇಶ್ವರ ಸಭಾ ಭವನದಲ್ಲಿ ನಡೆದ ಚಿಕ್ಕೋಡಿ ಜಿಲ್ಲಾ ಮಟ್ಟದ ಗಾಂಧಿಸ್ಮೃತಿ ಮತ್ತು ಸಮಾವೇಶ ಕಾರ್ಯಕ್ರಮವನ್ನು ಚಿಕ್ಕೋಡಿಯ ಸಂಕಿರ್ತನ ಮಠದ ಮ ನಿ ಪ್ರ. ಸಂಪಾದನಾ ಶ್ರೀಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಸಭೆಯಲ್ಲಿ ಮುಖ್ಯ ಅತಿಥಿ ಗಳಾಗಿ ರವಿ ಬೆಳಲಿ, ತಾಲೂಕು ಉಪ ದಂಡಾಧಿಕಾರಿಗಳು ಚಿಕ್ಕೋಡಿ, ಬಸಗೌಡ ನೇರ್ಲಿ, ಉಪನಿರೀಕ್ಷಕರು, ಆರಕ್ಷಕಠಾಣೆ, ಚಿಕ್ಕೋಡಿ, ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಸಂತ ಸಾಲಿಯನ, ಚಿಕ್ಕೋಡಿ ಜಿಲ್ಲಾ ಜನ ಜಾಗೃತಿ ಅಧ್ಯಕ್ಷರಾದ ಸಂಜಯ ನಾಡಗೌಡ, ಚಿಕ್ಕೋಡಿ ಜಿಲ್ಲಾ ಜನ ಜಾಗೃತಿ ವೇದಿಕೆಯ ಸ್ಥಾಪಕಧ್ಯಕ್ಷರಾದ ಶ್ರೀ ಸುಭಾಷ್ ಮುನ್ನೊಳ್ಳಿ, ಜಿಲ್ಲಾ ನಿರ್ದೇಶಕರಾದ ಶ್ರೀ ವಿಠ್ಠಲ್ ಸಾಲಿಯನ್, ಜಿಲ್ಲಾ ಜನಜಾಗೃತಿ ವೇದಿಕೆಯ ಎಲ್ಲ ಸದಸ್ಯರು, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಏನ್, ಜಿಲ್ಲೆಯ 7 ತಾಲೂಕುಗಳ ಯೋಜನಾಧಿಕಾರಿಗಳು, ಚಿಕ್ಕೋಡಿ 1 ಮತ್ತು 2 ತಾಲೂಕಿನ ಮೇಲ್ವಿಚಾರಕ ಶ್ರೇಣಿಯ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
