ಅಥಣಿ ಜಿಲ್ಲಾ ಮಟ್ಟದ ಗಾಂಧಿಸ್ಮೃತಿ ಮತ್ತು ವ್ಯಸನ ಮುಕ್ತರ ಸಮಾವೇಶ ಹಾರೋಗೇರಿ ತಾಲೂಕಿನ ಸಭಾಭವನದಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಪರಮಾನಂದವಾಡಿ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಸದ್ಗುರು ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಕರ್ನಾಟಕ ರಾಜ್ಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಮನಸ್ಥಿತಿ ಇರುವ ಸಂಸದರು ಆಯ್ಕೆಯಾದರೆ ಕರ್ನಾಟಕ ಗಾಂಧಿ ರಾಮರಾಜ್ಯವಾಗಬಹುದು ಎಂದು ಬಣ್ಣಿಸಿ ಧರ್ಮಸ್ಥಳದ ಮತ್ತು ಯೋಜನೆಯ ಕಾರ್ಯಕ್ರಮಗಳನ್ನು ಕೊಂಡಾಡಿ ನವಜೀವನ ಸಮಿತಿಯ ಸದಸ್ಯರಿಗೆ ಮುಂದೆ ಒಳ್ಳೆಯ ಭವಿಷ್ಯ ಪ್ರಾಪ್ತಿಯಾಗಲಿ ಎಂದು ಆಶೀರ್ವಚಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಯುತ ಡಿಸಿ ಸದಲಗಿ ಹರಿಹಂತ ಚಾರಿಟೇಬಲ್ ಪೌಂಡೇಶನ್ ರಾಯಭಾಗರವರುವಹಿಸಿ ಯೋಜನೆಯ ಕಾರ್ಯಕ್ರಮಗಳಿಂದಾಗಿ ಜನರಲ್ಲಿ ಮೂಡಿದ ಜಾಗೃತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಉದ್ಘಾಟನೆ ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಕ್ಷೇತ್ರದ ಅಭಯದಾನದ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಸಂಪನ್ಮೂಲ ವ್ಯಕ್ತಿಯ ಮಾರ್ಗದರ್ಶನ :ಶ್ರೀ ಡಿ ಎಸ್ ನಾಯ್ಕ ರಾಯಬಾಗ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರು ಮಹಾತ್ಮ ಗಾಂಧಿಯ ಜೀವನ ಚರಿತ್ರೆ ಹಾಗೂ ಅವರ ತತ್ವಗಳನ್ನು ವಿವರಿಸಿ ಪೂಜ್ಯರಿಗೆ ಹೋಲಿಕೆ ಮಾಡಿ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಸಂಜಯ್ ನಾಡಗೌಡ, ಸೀತಾ ರವಿಚಂದ್ರ ಡಿಬಿ ಸರ್ಕಲ್ ಇನ್ಸ್ಪೆಕ್ಟರ್, ಶ್ರೀ ಅಭಿಷೇಕ್ ಎಸ್ ಪಾಂಡೆ ಕೆಎಂಎಎಸ್ ಮುಖ್ಯ ಅಧಿಕಾರಿಗಳ ಪುರಸಭೆ ಹಾರೋಗೇರಿ, ಸಂದರ್ಭದಲ್ಲಿ ಪೂರಕವಾಗಿ ಮಾತನಾಡಿ ಶುಭ ಹಾರೈಸಿದರು.ಜನಜಾಗೃತಿ ಜಾತ: ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಆಕರ್ಷಿಕ ಜನಜಾಗೃತಿ ಜಾತವು ಹಾರೋಗೇರಿಯ ಮುಖ್ಯ ರಸ್ತೆಯಲ್ಲಿ ಸಾಗಿತು.ಪುರಸಭಾ ಪೌರಕಾರ್ಮಿಕರಿಗೆ & ಪೊಲೀಸ್
ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನಗರ ಸ್ವಚ್ಛತೆಯನ್ನು ಮಾಡುವ ಪೌರಕಾರ್ಮಿಕರಿಗೆ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳನ್ನು ಗೌರವಿಸಲಾಯಿತು. ನವಜೀವನ ಸಮಿತಿ ಸದಸ್ಯರಿಗೆ & ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರಿಗೆ ಅಭಿನಂದನೆ ವರದಿ ವರ್ಷದಲ್ಲಿ ಪಾನಮುಕ್ತರಾದ ನವಜೀವನ ಸಮಿತಿಯ ಸದಸ್ಯರನ್ನು ಮತ್ತು ಉತ್ತಮ ಸೇವೆ ನೀಡುತ್ತಿರುವ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರನ್ನು ಗುಲಾಬಿ ಹೂವ ನೀಡಿ ಗೌರವತವಾಗಿ ಗೌರವಿಸಲಾಯಿತು.ಠಾರಾವು ಮಂಡನೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮೂಲಕ ನಿರ್ಣಯವನ್ನು ಮಂಡನೆಯನ್ನು ಮಾಡಿ ಮನವಿ ಸಲ್ಲಿಸಲಾಯಿತು. ಕಾರ್ಯಕ್ರಮದ ಉತ್ತಮ ಸಂಘಟನೆಯನ್ನು ಮಾಡಿ ಅತಿಥಿಗಳನ್ನು ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ರವರು ಸ್ವಾಗತಿಸಿದರು.ಕಾರ್ಯಕ್ರಮದ ನಿರ್ವಹಣೆಯನ್ನು ಮೂಡಲಗಿ ಯೋಜನಾಧಿಕಾರಿ ರಾಜು ನಾಯ್ಕ್ & ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ರವರು ಮಾಡಿದರು. ಉತ್ತಮ ವ್ಯವಸ್ಥೆಗಳೊಂದಿಗೆ ಯಶಸ್ವಿ ಕಾರ್ಯಕ್ರಮದ ಜವಾಬ್ದಾರಿಯನ್ನು ಹಾರೂಗೇರಿ ಯೋಜನಾಧಿಕಾರಿ ಕಿರಣ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರುಗಳು, ಜಿಲ್ಲೆಯ ಇತರ ತಾಲೂಕಿನ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
