ಚಿಂತಾಮಣಿ ತಾಲೂಕಿನಲ್ಲಿ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ

Janajagurthi Vedike News

ಪೂಜ್ಯರು ಹಾಗೂ ಅಮ್ಮನವರ ಕೃಪಾಶಿರ್ವದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ bc ಟ್ರಸ್ಟ್ ಚಿಂತಾಮಣಿ ತಾಲ್ಲೂಕು ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿವೇದಿಕೆ ಬೆಳ್ತಂಗಡಿ ವತಿಯಿಂದ ಚಿಂತಾಮಣಿ ತಾಲೂಕಿನಲ್ಲಿ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು ಸದ್ರಿ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಶ್ರೀಯುತ ಜಿ ಏನ್ ಚಲಪತಿ ನಗರಸಭೆ ಪೌರಯುಕ್ತರು, ಉದ್ಘಾಟಕರಾಗಿ ಶ್ರೀಯುತ ಎಸ್ ಆನಂದ್ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್, ಆಶಯ ನುಡಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರವಾನ್ವಿತ ನಿರ್ದೇಶಕರಾದ ಶ್ರೀಯುತ ಪ್ರಶಾಂತ್ ಸಿ ಎಸ್ ಮತ್ತು ಮುಖ್ಯ ಅತಿಥಿಗಳಾಗಿ
ಶ್ರೀಯುತ ಮುರುಳಿಧರ್ ಡಿ ವೈ ಎಸ್ ಪಿ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀಯುತ ಆರ್ ರಾಧಾಕೃಷ್ಣ , ಶ್ರೀಯುತ ಕುಪೇಂದ್ರಪ್ಪ,
ಶ್ರೀಯುತ ವಿ ಮಂಜುನಾಥ್ ಹಾಗೂ ತಾಲೂಕಿನ ಎಲ್ಲಾ ಪತ್ರಿಕಾ ಬಾಂದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿತು. ಸದ್ರಿ ಕಾರ್ಯಕ್ರಮದಲ್ಲಿ ಮಾಶಾಸನ ವಿತರಣೆ, ಜನಮಂಗಳ ಸಲಕರಣೆ ವಿತರಣೆ, ಪ್ರಗತಿರಕ್ಷಕವಚ ಸಾಂಕೇತಿಕ ಚೆಕ್ ವಿತರಣೆಯನ್ನು ಗಣ್ಯರ ಮೂಲಕ ಮಾಡಿಸಿ ಫಲಾನುಭವಿಗಳಿಗೆ ಶುಭ ಹಾರೈಕೆಗಳನ್ನು ಸಲ್ಲಿಸಲಾಯಿತು.