ತಿಪುಟೂರು ಗ್ರಾಮಾಂತರ ತಾಲೂಕಿನ ನೊಣವಿನಕೆರೆ ವಲಯದಲ್ಲಿ ಹಮ್ಮಿಕೊಂಡಿದ್ದ ಗಾಂಧಿಸ್ಮೃತಿ ಮತ್ತು ಪಾನಮುಕ್ತ ಸದಸ್ಯರ ಅಭಿನಂದನಾ ಕಾರ್ಯಕ್ರಮಕ್ಕೆ ಶ್ರೀ ಶ್ರೀ ಶ್ರೀ ಕರಿ ವೃಷಭ ದೇಶೀ ಕೇಂದ್ರ ಶಿವಾ ಯೋಗಿಶ್ವರ ಸ್ವಾಮೀಜಿಗಳು, ಮಾನ್ಯ ಶಾಸಕರು ಕೆ ಷಡಕ್ಷರಿ ರವರು, ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಶುಭ ಹಾರೈಕೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ನಿರ್ದೇಶಕರಾದ ದಯಾಶೀಲ ಮೇಡಂ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯಕ್ ಸರ್ ತಿಪಟೂರು ಗ್ರಾಮಾಂತರ ಯೋಜನಾಧಿಕಾರಿಗಳಾದ ಸುರೇಶ್ ಮತ್ತು ಊರಿನ ಗಣ್ಯರು, ಒಕ್ಕೂಟದ ಪದಾಧಿಕಾರಿಗಳು, ಹಾಗೂ ಸಂಘದ ಸದಸ್ಯರು ಉಪಸ್ಥಿತಿ ಇದ್ದರು.
