ಯರಗಟ್ಟಿ ತಾಲೂಕಿನ ಬಸವೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬೆಳಗಾವಿ 2 ಜಿಲ್ಲೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳಗಾವಿ 2 ಜಿಲ್ಲೆ, ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಗಾಂಧಿ ಸ್ಮೃತಿ ಹಾಗೂ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ನೆರವೇರಿಸಿದರು.ವಿವಿಧ ಸೌಲಭ್ಯಗಳ ವಿತರಣೆಯನ್ನು ಸನ್ಮಾನ್ಯ ಶ್ರೀ ವಿಶ್ವಾಸ್ ವಸಂತ ವೈದ್ಯ ಮಾನ್ಯ ಶಾಸಕರು ನೆರವೇರಿಸಿ ಯೋಜನೆಯ ಜನ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಧ್ಯವರ್ಜನ ಶಿಬಿರ ಪೂಜ್ಯರ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಮೆಚ್ಚುಗೆಯನ್ನು ಸೂಚಿಸಿ ಶುಭ ಹಾರೈಸಿದರು.ಕಾರ್ಯಕ್ರಮದ ಸಾನಿಧ್ಯವಹಿಸಿದಂತ ಶ್ರೀ ಮುರುಗೇಂದ್ರ ಮಹಾಸ್ವಾಮಿಗಳು ಮಾತನಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ಹಾಗೂ ವ್ಯಸನಕ್ಕೆ ಒಳಗಾದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಂತ ಪೂಜ್ಯರ ಚಿಂತನೆ ಹಾಗೂ ಸಮಾಜದ ಪರಿವರ್ತನೆಯ ಇಂತಹ ಕಾರ್ಯಕ್ರಮ ಅಭಿನಂದನಾರ್ಹ ಎಂದು ಶುಭ ಹಾರೈಸಿದರು.ಕಾರ್ಯಕ್ರಮದ ಆಶಯ ಭಾಷಣವನ್ನು ಶ್ರೀ ವಸಂತ್ ಸಾಲ್ಯಾನ್ ಪ್ರಾದೇಶಿಕ ನಿರ್ದೇಶಕರು (ಶ್ರೀ ಕ್ಷೇ ಧ ಗ್ರಾ ಯೋ ಧಾರವಾಡ ಪ್ರಾ ವ್ಯಾಪ್ತಿ).ಯೋಜನೆಯ ಹಲವಾರು ಕಾರ್ಯಕ್ರಮದ ಬಗ್ಗೆ ಹಾಗೂ ಸದುಪಯೋಗ ದ ಬಗ್ಗೆ ಕರೆ ನೀಡಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವಂತ ASI ಶ್ರೀ H R ರಂಗಣ್ಣನವರು ಮಾತನಾಡಿ ಕಾನೂನಿನಲ್ಲಿ ಸರಿಪಡಿಸಲಾಗದೇ ಇರುವವರನ್ನು ಧರ್ಮಸ್ಥಳ ಯೋಜನೆಯ ಶಿಬಿರದಿಂದ ಕುಡಿತವನ್ನು ಬಿಡಿಸಿ ಸಮಾಜದಲ್ಲಿ ಗೌರವಯುತವಾಗಿ ಬದಕಲು ಅವಕಾಶ ಮಾಡಿಕೊಟ್ಟಿದ್ದಾರೆ,ಇಂತಹ ಇನ್ನು ಹಲವಾರು ಜನಜಾಗೃತಿ ಕಾರ್ಯಕ್ರಮಗಳು ಪೂಜ್ಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಶ್ರೀ ಎಸ್ ಎಸ್ ಮುಗಳಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವಂತ ಶ್ರೀ ಸುಭಾಷ್ ಹನಸಿ (ಅ.ಕ.ಜ.ಜಾ.ವೇ.ಬೆಳಗಾವಿ 2 ಜಿಲ್ಲೆ) ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಎರಗಟ್ಟಿಯ ಮುಖ್ಯ ಬೀದಿಯಲ್ಲಿ ಆಕರ್ಷಕ ಜಾತವು ಗಮನ ಸೆಳೆಯಿತು.ಸಭಾ ಕಾರ್ಯಕ್ರಮದಲ್ಲಿ ಮಾನ್ಯ ರಾಜ್ಯದ ಮುಖ್ಯಮಂತ್ರಿಗಳಿಗೆ ಠಾರಾವು ಮಾಡಿ ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ಮಂಡಿಸಿದರು. ಶ್ರೀ ಸೋಮಶೇಖರ್ ಮಗದುಮ್, ಶ್ರೀ ಅಜಿತ್ ಕುಮಾರ್ ದೇಸಾಯಿ, ಶ್ರೀ ರಮೇಶ್ ಗೌಡಪ್ಪ ದೇವರೆಡ್ಡಿ ,ಜಿಲ್ಲಾ ನಿರ್ದೇಶಕರಾದ ಶ್ರೀ ಎಚ್ ಆರ್ ಲವ ಕುಮಾರ್, ಐದು ತಾಲೂಕಿನ ಯೋಜನಾಧಿಕಾರಿಗಳು, ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಪತ್ರಿಕಾ ವರದಿಗಾರರು, ನವಜೀವನ ಸಮಿತಿ ಸದಸ್ಯರು , ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು, ಒಕ್ಕೂಟದ ಪದಾಧಿ ಪದಾಧಿಕಾರಿಗಳು , ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು,VLE ಗಳು , ಸೇವಾ ಪ್ರತಿನಿಧಿಗಳು, ಶೌರ್ಯ ತಂಡದ ಸದಸ್ಯರು, ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು,ಸುಮಾರು 3000 ಜನ ಈ ಅದ್ಭುತ ಕಾರ್ಯಕ್ರಮಕ್ಕೆ ಸಾಕ್ಷಿಯಾದರು,ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕ ನುಡಿ ಹಾಗೂ ರೂಪುರೇಷೆಗಳ ಬಗ್ಗೆ ತಿಳಿಸಿ ಎಲ್ಲರನ್ನು ಗೌರವಪೂರ್ವಕವಾಗಿ ಶ್ರೀ ಎಚ್ ಆರ್ ಲವಕುಮಾರ ನಿರ್ದೇಶಕರು ಬೆಳಗಾವಿ 2 ಜಿಲ್ಲೆ ಸ್ವಾಗತಿಸಿದರು.ಯರಗಟ್ಟಿ ತಾಲೂಕಿನ ಯೋಜನಾಧಿಕಾರಿಗಳಾದ ಸತೀಶ್ ಡಿ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
