ಕೊಪ್ಪಳ ಪ್ರಾದೇಶಿಕ ವಿಭಾಗದ ಗದಗ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಗಾಂಧಿ ಸ್ಮೃತಿ, ಪಾನಮುಕ್ತರಿಗೆ ಅಭಿನಂದನೆ ಮತ್ತು ಪದಗ್ರಹಣ ಕಾರ್ಯಕ್ರಮವನ್ನು ನಡೆಸಲಾಯಿತು.ಗದಗ ಜಿಲ್ಲೆಯ ಶ್ರೀ ತೋಂಟದಾರ್ಯ ಮಠದ ಬೃಹತ್ ಜನಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು. ನವಜೀವನ ಸದಸ್ಯರು, ಶೌರ್ಯ ಸ್ವಯಂಸೇವಕರು, ಫಲಾನುಭವಿಗಳು, ಗಣ್ಯರು ಜಾಥಾ ಕಾರ್ಯಕ್ರಮದಲ್ಲಿ ಉಪಸ್ಥಿರಿದರು.ಡೊಳ್ಳು ಕುಣಿತ, ಛದ್ಮವೇಶ, ಟ್ಯಾಬ್ಲೋ, ಜಾಥಾ ಕಾರ್ಯಕ್ರಮಕ್ಕೆ ಹೆಚ್ಚುವರಿ ಮೆರಗನ್ನ ನೀಡಿತ್ತು.ಸನ್ಮಾನ್ಯ ಹೆಚ್. ಕೆ. ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರು, ಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಷ್ಪ ನಮನ ಮಾಡಿದರು.ಜಿಲ್ಲಾ ನಿರ್ದೇಶಕರಾದ ಶ್ರೀ ಯೋಗೀಶ್. ಎ. ರವರು ಜನ ಜಾಗೃತಿಯ ಹಕ್ಕೋತ್ತಾಯ ವಿಚಾರವನ್ನು ವಾಚಿಸಿದರು ನಂತರ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಣೇಶ್ ಬಿ ಹಾಗೂ ಜನಜಾಗೃತಿ ಸದಸ್ಯರು ಠರಾವು ನ್ನು ಸಚಿವರಿಗೆ ನೀಡಿದರು. ಜನ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ಜನ ಜಾಗೃತಿ ಪದಾಧಿಕಾರಿಗಳು ಪಾನಮುಕ್ತರಿಗೆ ಅಭಿನಂದಿಸಿದರು. ಗದಗ ಜಿಲ್ಲಾ ಜನಜಾಗೃತಿ ವೇದಿಕೆಯ ಪದಗ್ರಹಣ ಕಾರ್ಯಕ್ರಮವನ್ನು ಜನ ಜಾಗೃತಿ ರಾಜ್ಯಾಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿರವರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀ ಶಿವಾನಂದ ಬೆಂತೂರ್, ಹಾಗೂ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಹುಣಸಿಕಟ್ಟಿ ಪದಗ್ರಹಣ ಮಾಡಿದರು.ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.ಶ್ರೀ ತೋಂಟದ ಡಾ| ಸಿದ್ದರಾಮ ಮಹಾಸ್ವಾಮಿಗಳು , ತೋಂಟದಾರ್ಯ ಮಠ ಗದಗ ಆಶೀರ್ವಚನದ ಸಂದೇಶ ನೀಡಿದರು. ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಣೇಶ್.ಬಿ. ರವರು ಗಾಂಧಿ ಜಯಂತಿ ಕಾರ್ಯಕ್ರಮದ ಕುರಿತಂತೆ ಜನಜಾಗೃತಿ ವೇದಿಕೆಯ ಸಾಧನೆಯ ವಿವರ ನೀಡಿದರು.ಈ ಬೃಹತ್ ಜನಜಾಗೃತಿ ಸಮಾವೇಶದಲ್ಲಿ *ಶ್ರೀ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದು,,ಗಣ್ಯರಾದ ಶ್ರೀ ಹೆಚ್. ಕೆ.ಪಾಟೀಲ್, ಸಚಿವರು ಕರ್ನಾಟಕ ಸರ್ಕಾರ, ಶ್ರೀ ರಾಜಣ್ಣ ಕೊರವಿ ರಾಜ್ಯಾಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ಗಣೇಶ್ ಬಿ ಪ್ರಾದೇಶಿಕ ನಿರ್ದೇಶಕರು, ಶ್ರೀ ಶಿವಪ್ರಕಾಶ್ ಮಹಾಜನ್ ಶೆಟ್ಟರ್, ಶ್ರೀ ಶಿವಾನಂದ ಬೆಂತೂರ್, ಶ್ರೀ ಚಂದ್ರಶೇಖರ್ ಹುಣಸಿಕಟ್ಟಿ, ಶ್ರೀ ಹೆಚ್ ಬಿ ಅಸೂಟಿ, ಶ್ರೀ ಮಹದೇವಸ್ವಾಮಿ, ಶ್ರೀ ಯೋಗೀಶ್ ಎ, ವಾಸಣ್ಣ ಕುರಡಗಿ, ಗದಗ ಜಿಲ್ಲಾ ಜನ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
