1742ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ), ತುರುವೇಕೆರೆ ತಾಲ್ಲೂಕು ತುಮಕೂರು -1ಜಿಲ್ಲೆ ತುರುವೇಕೆರೆ ನಗರ ಯೋಜನಾ ಕಛೇರಿ ವ್ಯಾಪ್ತಿಯ ಕಸಬಾ ವಲಯದ ಬಿ.ಜಿ.ಎಸ್ ಕಲ್ಯಾಣ ಮಂಟಪದಲ್ಲಿ 1742ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಮಾನ್ಯ ಜನಜಾಗೃತಿ ಯೋಜನಾಧಿಕಾರಿಯವರಾದ ಶ್ರೀ ತಿಮ್ಮಯ್ಯ ನಾಯ್ಕಸರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಯಕ್ರಮದಲ್ಲಿ ಆಸೀನರಾಗಿದ್ದ ಅತಿಥಿ ಮಹೋದಯರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ದಯಾಶೀಲ (ಹಿರಿಯ ನಿರ್ದೇಶಕರು ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ (ರಿ) ತುಮಕೂರು -1 ಜಿಲ್ಲೆ), ಶ್ರೀ ಡಾ.ಚೌದ್ರಿ ನಾಗೇಶ್ (ವೈದ್ಯರು ಚೌದ್ರಿ ಆಸ್ಪತ್ರೆ ತುರುವೇಕೆರೆ),ಶ್ರೀ ಆರ್ ಮಲ್ಲಿಕಾರ್ಜುನ್
(ಅಧ್ಯಕ್ಷರು ಶ್ರೀ ಸತ್ಯಗಣಪತಿ ಸೇವಾ ಸಮಾಜ ತುರುವೇಕೆರೆ.), ಶ್ರೀ ರಾಗಿ ರಂಗೇಗೌಡ (ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ತುಮಕೂರು -1 ಜಿಲ್ಲೆ), ಶ್ರೀ ಡಿ.ಪಿ.ರಾಜು (ಅಧ್ಯಕ್ಷರು ತಾಲ್ಲೋಕು ಕ.ಸಾ.ಪ ತುರುವೇಕೆರೆ.), ಶ್ರೀ ಯಜಮಾನ್ ಮಹೇಶ್ (ಸದಸ್ಯರು ಪಟ್ಟಣ ಪಂಚಾಯಿತಿ ತುರುವೇಕೆರೆ.) ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಧನಪಾಲ್ (ಅಧ್ಯಕ್ಷರು 1742ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ತುರುವೇಕೆರೆ)ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ತುರುವೇಕೆರೆ ನಗರ ತಾಲೂಕು ಮಾನ್ಯ ಯೋಜನಾಧಿಕಾರಿಗಳಾದ ಶ್ರೀ ಯಶೋಧರ್.ಕೆ ,ಶಿಬಿರಾಧಿಕಾರಿ ದಿನೇಶ್ ಮರಾಠಿ ಆರೋಗ್ಯ ಸಹಾಯಕರಾದ ಶ್ರೀಮತಿ ಜಯಲಕ್ಷ್ಮಿ, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ದರ್ಶನ್.ಎಂ.ಎಸ್ ಹಾಗೂ ನವಜೀವನ ಸಮಿತಿ ಸದಸ್ಯರು,ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು/ಪದಾಧಿಕಾರಿಗಳು,ಪ್ರಗತಿಬಂಧು/ಸ್ವಸಹಾಯ ಸಂಘದ ಸದಸ್ಯರು, ವಲಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ತುರುವೇಕೆರೆ ನಗರ ತಾಲ್ಲೂಕಿನ ಎಲ್ಲಾ ಮೇಲ್ವಿಚಾರಕರು ಜ್ಞಾನವಿಕಾಸ ಸಮನ್ವಯಾಧಿಕಾರಿ, ತಾಲೂಕಿನ ಸೇವಾಪ್ರತಿನಿಧಿಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.