ಉಡುಪಿ ಪ್ರಾದೇಶಿಕ ವಿಭಾಗದ ಕುಂದಾಪುರ 1 ಮತ್ತು ಕುಂದಾಪುರ 2 ತಾಲೂಕು ವತಿಯಿಂದ ಹಮ್ಮಿಕೊಂಡ ಗಾಂಧಿ ಜಯಂತಿ ನಿಮಿತ್ತ ಜನಜಾಗೃತಿ ಜಾಥ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕುಂದಾಪುರ 1 ಕುಂದಾಪುರ 2 ಇವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿಯ ಜಾಥ ಹಾಗೂ ಸಮಾವೇಶ ಕುಂದಾಪುರದ ಮೊಗವೀರ ಸಭಾಭವನದಲ್ಲಿ ಆಯೋಜಿಸಲಾಗಿದೆ ಉದ್ಘಾಟನೆಯನ್ನ ನೆರವೇರಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕಿರಣ್ ಕುಮಾರ್
ಕೊಡ್ಗಿಯವರು ಮನಸ್ಸನ್ನು ಪರಿವರ್ತನೆ ಮಾಡುವ ಮೂಲಕ ಹಲವಾರು ಮಂದಿ ಮದ್ಯಮುಕ್ತರಾಗಿ ನವಜೀವನ ಆರಂಭಿಸಿ, ಸಂತಸದ ಜೀವನ ನಡೆಸುತ್ತಿದ್ದಾರೆ. ದುಶ್ಚಟ ಮುಕ್ತ ಜೀವನ ನಡೆಸಲು ಸಂಕಲ್ಪ ಶಕ್ತಿಬೇಕು ದುಶ್ಚಟದಿಂದ ದೂರ ಇರಲು ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಡಬೇಕಾಗಿದೆ.ಸ್ವಇಚ್ಛೆಯಿಂದ ಮನೋಬಲವನ್ನು ಹೆಚ್ಚಿಸಿ ದುಶ್ಚಟದಿಂದ ದೂರ ಇರುವ ಪ್ರಯತ್ನ ಎಲ್ಲರೂ ಮಾಡಬೇಕು ಎಂದು. ಮಾನ್ಯ ಶಾಸಕರು ಹೇಳಿದರು. ಜನಜಾಗ್ರತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ರಟ್ಟಾಡಿ, ಅಧ್ಯಕ್ಷತೆ ವಹಿಸಿದರು. ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಹಾಗೆ ಅದೇ ವೇದಿಕೆಯಲ್ಲಿ ಅತಿಥಿ ಅಭ್ಯಾಗತರು ಕೂಡಿಕೊಂಡು ಮಾನ್ಯ ಶಾಸಕರನ್ನು ಸನ್ಮಾನಿಸಿದ್ದರು.ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಶ್ರೀ ಗಣೇಶ್ ಆಚಾರ್ಯರವರು ಆಶಯ ಭಾಷಣವನ್ನು ಮಾಡಿದರು.ಸದ್ರಿ ಕಾರ್ಯಕ್ರಮದಲ್ಲಿ ರಾಜಗೋಪಾಲ್ ಆಚಾರ್ಯ (ಖ್ಯಾತ ರಥ ಶಿಲ್ಪಿ ಕೊಟೇಶ್ವರ) ಜಗದೀಶ್ ಮೇಸ್ತ್ರಿ ಮಾರ್ಕೊಡ, ಎಸ್.ಕೆ.ಡಿ.ಆರ್.ಡಿ.ಪಿ. ಜಿಲ್ಲಾ ನಿರ್ದೇಶಕರಾದ ಶ್ರೀ ಶಿವರಾಯ ಪ್ರಭು, *ಯು ಎಸ್.ಶೆಣೈ, ಜನಜಾಗೃತಿಯ ವೇದಿಕೆ ಸದಸ್ಯ ಸುಬ್ರಹ್ಮಣ್ಯ ಶೆಟ್ಟಿ, ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಶೋಭಾ ಚಂದ್ರ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕುಂದಾಪುರ ತಾ!! ಅಧ್ಯಕ್ಷ ರಾಜೇಂದ್ರ ಕುಮಾರ್, ಹಾಗೂ ಜನಜಾಗೃತಿ ವೇದಿಕೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ನಾರಾಯಣ ಪಾಲನ್ ರವರು ತರಾವು ಮಂಡನೆ ಮಾಡಿದರು. ಶ್ರೀಮತಿ ಪಾರ್ವತಿ ಯವರು ಎಲ್ಲರನ್ನೂ ಸ್ವಾಗತಿಸಿದರು.ಹಾಗೂ ಎಲ್ಲಾ ಮೇಲ್ವಿಚಾರಕರು ಕಾರ್ಯಕರ್ತರು ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ ದ ಸ್ವಯಂಸೇವಕರು,ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಗಳ ಸದಸ್ಯರು, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ರ ವತಿಯಿಂದ ಹಮ್ಮಿಕೊಂಡ ಗಾಂಧಿ ಜಯಂತಿ ನಿಮಿತ್ತ ಜನಜಾಗೃತಿ ಜಾಥ ಕಾರ್ಯಕ್ರಮಕ್ಕೆ ಮಾಜಿ ಶಾಸಕರು, ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರು ಆದ ಶ್ರೀ ಅಪ್ಪಣ್ಣ ಹೆಗ್ಡೆ ಯವರು ಚಾಲನೆ ನೀಡಿದರು.