ಮಳವಳ್ಳಿಯಲ್ಲಿ ಜರಗಿದ ಗಾಂಧಿ ಜಯಂತಿಯ ಪ್ರಯುಕ್ತ ಪಾನಮುಕ್ತರ ಸಮಾವೇಶ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ಮಂಡ್ಯ ವೇದಿಕೆಯ ವತಿಯಿಂದ ಅಕ್ಟೋಬರ್ 2 ಗಾಂಧಿ ಜಯಂತಿಯ ಪ್ರಯುಕ್ತ ಪಾನಮುಕ್ತರ ಸಮಾವೇಶ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನ ಕಾರ್ಯಕ್ರಮ ದಿನಾಂಕ 5/10/2023 ಅಂಬೇಡ್ಕರ್ ಸಮುದಾಯ ಭವನ ಮಳವಳ್ಳಿ ಜರಗಿತು.ಈ ಕಾರ್ಯಕ್ರಮವನ್ನು ಶ್ರೀ ಮರಿ ತಿಪ್ಪೇಗೌಡರು ವಿಧಾನ ಪರಿಷತ್ ಸದಸ್ಯರು ಕಾರ್ಯಕ್ರಮವನ್ನುಉದ್ಘಾಟಿಸಿ ನವಜೀವನ ಸಮಿತಿ ಸದಸ್ಯರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಕೃಷ್ಣಪ್ಪ ಉಪಪೊಲೀಸ್ ಅಧ್ಯಕ್ಷರು ಮಳವಳ್ಳಿ ಇವರು ಮಧ್ಯವರ್ಜನ ಶಿಬಿರಗಳ ಬಗ್ಗೆ ಉತ್ತಮ ಶ್ಲಾಘನೀಯ ವ್ಯಕ್ತಪಡಿಸಿದರು ಹಾಗೂ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಬಸವನಂದ ಸ್ವಾಮಿಗಳು ವೇದಾಶ್ರಮ ಕಿಲಾರಿಕೊಪ್ಪ ಮದ್ದೂರು ನವಜೀವನ ಸಮಿತಿ ಸದಸ್ಯರಿಗೆ ಪಾನಮುಕ್ತ ಜೀವನ ನಡೆಸುವುದರ ಬಗ್ಗೆ ಆಶೀರ್ವಚನ ನೀಡಿದರು ಉದ್ದೇಶಿಸಿ ಶುಭನುಡಿದರು. ಕಾರ್ಯಕ್ರಮದಲ್ಲಿ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು, ಜಿಲ್ಲಾ
ನಿರ್ದೇಶಕರು, ಜನಜಾಗೃತಿ ವೇದಿಕೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಜಿಲ್ಲೆಯ ಎಲ್ಲಾ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.