ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಚಿತ್ರದುರ್ಗ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ (ರಿ) ಚಿತ್ರದುರ್ಗ 2023-24 ನೇ ಸಾಲಿನ ಕ್ರೀಯಾ ಯೋಜನೆ 2 ಸಭೆ ಇಂದು ಚಳ್ಳಕೆರೆ ಯೋಜನಾ ಕಛೇರಿಯ ಜೈನ ಭವನದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಮಾರುತೇಶ್.ಎಸ್ ಹಾಗೂ ನೂತನ ಅದ್ಯಕ್ಷರಾದ ಬಿ ಪಿ ಓಂಕಾರಪ್ಪ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಚರ್ಚಿಸಿದ ವಿಷಯಗಳು:- ಜಿಲ್ಲೆಯಲ್ಲಿ ಮಧ್ಯವರ್ಜನ ಶಿಬಿರ ಅಯೋಜನೆ ಮಾಡುವ ಕುರಿತು, ಸ್ವಾಸ್ಥ್ಯ- ಸಂಕಲ್ಪ ಕಾರ್ಯಕ್ರಮ ನಡೆಸುವ ಕುರಿತು, ತಾಲೂಕು ಮಟ್ಟದ ನವ ಜೀವನ ಸಮಿತಿ ಸಮಾವೇಶ ಕಾರ್ಯಕ್ರಮ ಮಾಡುವ ಕುರಿತು, ನವಜೀವನ ಸಮಿತಿಗಳನ್ನು ಬಲಪಡಿಸುವ ಕುರಿತು, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಬಗ್ಗೆ, ಜಿಲ್ಲಾ ವೇದಿಕೆ ಖಾತೆಯ ಖರ್ಚು ವೆಚ್ಚದ ಕುರಿತು, ಅಕ್ಟೋಬರ 2 ಕಾರ್ಯಕ್ರಮದ ಕುರಿತು.ಈ ಸಭೆಯಲ್ಲಿ ಜಿಲ್ಲಾ ನಿರ್ದೇಶಕರಾದ ಶ್ರೀ ದಿನೇಶ್ ಪೂಜಾರಿ,ಶ್ರೀವಿನಯ್ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಕಿರಣ್ ಜೈನ್, ಹಾಗೂ ನೂತನ ಅದ್ಯಕ್ಷ ಉಪಾಧ್ಯಕ್ಷರು ಮತ್ತು ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಕ್ಷೇತ್ರ ಹಾಗೂ ಜನಜಾಗೃತಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
