ಹರಿಹರ ಮತ್ತು ಮಲೆಬೆನ್ನೂರು ಯೋಜನಾ ಕಚೇರಿ ವತಿಯಿಂದ ಗಾಂಧಿಸ್ಮೃತಿ ಮತ್ತು ಬೃಹತ್‌ ಜನಜಾಗೃತಿ ಸಮಾವೇಶ

Janajagurthi Vedike News

ಹರಿಹರ ಮತ್ತು ಮಲೆಬೆನ್ನೂರು ಯೋಜನಾ ಕಚೇರಿ ವತಿಯಿಂದ ಮಲೆಬೆನ್ನೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದ ವೀರಣ್ಣ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧಿಸ್ಮೃತಿ ಮತ್ತು ಬೃಹತ್‌ ಜನಜಾಗೃತಿ ಸಮಾವೇಶದಲ್ಲಿ ಹರಿಹದ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಶಾರದೇಶಾನಂದ ಶ್ರೀಗಳು. ಹರಿಹರ ಆರೋಗ್ಯಮಾತೆ ಚಚ್೯ನ ಫಾದರ್ ಜಾಜ್೯ ಕೆ.ಎ.ರವರು. ಜಮಾಅತೆ ಇಸ್ಲಾಮೀ ಹಿಂದ್ನ ರಾಜ್ಯ ಕಾಯ೯ದಶಿ೯ಗಳಾದ ಮಂಗಳೂರಿನ ಶ್ರೀ ಮಹಮದ್ ಕುಂಞ. ದಾವಣಗೆರೆ ಜಿ.ಜ.ವೇ.ಜಿಲ್ಲಾಧ್ಯಕ್ಷರಾದ ಶ್ರೀ ಎಂ.ಬಿ.ನಾಗರಾಜ್ ಕಾಕನೂರ್. ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಶ್ರೀ ಚಿದಾನಂದಪ್ಪ ರವರು ಭಾಗವಹಿಸಿ ಪೂಜ್ಯರ ದೂರಗಾಮಿ ಯೋಜನೆಗಳ ಬಗ್ಗೆ ಶ್ಲಾಘಿಸಿದರು..
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಜಿ.ಜ.ವೇದಿಕೆಯ ಸದಸ್ಯರಾದ ಶ್ರೀ ಬಾಬಣ್ಣ ಹೊನ್ನಾಳಿ. ವಹಿಸಿದ್ದರು.. ಹರಿಹರ ದಾವಣಗೆರೆ ಭಾಗದ ದಾವಣಗೆರೆ ಜಿ.ಜ.ವೇದಿಕೆಯ ಸದಸ್ಯರು. ಸ್ಥಳಿಯ ಗಣ್ಯರು. ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ಶ್ರೀ ನಾಗರಾಜ್ ಕುಲಾಲ್ ಮಲೆಬೆನ್ನೂರು ಯೋಜನಾಧಿಕಾರಿ ಶ್ರೀ ವಸಂತ್ ದೇವಾಡಿಗ,ಹರಿಹರ ಯೋಜನಾಧಿಕಾರಿ ಶ್ರೀ ಗಣಪತಿ ಮಾಳಂಜಿ. ಮೇಲ್ವಿಚಾರಕರು,ಸೇವಾಪ್ರತಿನಿಧಿಗಳು,ಪದಾಧಿಕಾರಿಗಳು,ಸಂಪನ್ಮಲ ವ್ಯಕ್ತಿಗಳು ಭಾಗವಹಿಸಿದ್ದರು.