ಬೆಳ್ತಂಡಿಯಲ್ಲಿ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಉದ್ಘಾಟನೆ

Janajagurthi Vedike News

ಬೆಳ್ತಂಡಿಯಲ್ಲಿ ಜರಗಿದ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶವನ್ನೂ ಶ್ರೀ ಕೆ ಪ್ರತಾಪ್ ಸಿಂಹ ನಾಯಕ್ ಉದ್ಘಾಟನೆ ಮಾಡಿದರು. ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಡಾ ಎಲ್ ಏಚ್ ಮಂಜುನಾಥ್ ರವರು ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯನ್ನ ಪ್ರತಿಪಾದನೆ ಮಾಡಿದರು ನಾವು ಸತ್ಯದ ಹಾದಿಯಲ್ಲಿ ಇರಬೇಕು ಗಾಂಧೀಜಿ ಕಾಲವಾದ ನಂತರ ಸತ್ಯ ಮತ್ತು ಅಹಿಂಸೆ ಯನ್ನೂ ಪ್ರತಿಪಾದನೆ ಮಾಡಿದವರು ಪರಮ ಪೂಜ್ಯ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರು ಸತ್ಯ ಮತ್ತು ಮೌಲ್ಯವನ್ನೂ ಪೂಜ್ಯರು ಮಾಡುತ್ತ ಬಂದಿದ್ದಾರೆ ಮಾತುಗಳಲ್ಲಿ ಸರಿಯಾದ ಶಬ್ದ ಗಳನ್ನ ಬಳಕೆ ಮಾಡಬೇಕು ಮನದ ನಂಬಿಕೆಯನ್ನು ತೋರಿಸಬೇಕು ಸುಳ್ಳುಗಳನ್ನು ಒಪ್ಪುವುದಾದರೆ ನಾವು ಕಾರ್ಯಕ್ರಮ ಮಾಡಿ ಏನೂ ಪ್ರಯೋಜನ ಸುಳ್ಳು ಹೇಳುವಾಗ ರೋಚಕತೆ ಮತ್ತು ರಂಜನೆಯನ್ನು ಕೊಡುತ್ತದೆ ನಾವು ಅದನ್ನು ನಂಬುತ್ತೇವೆ ಎಂದಾದರೆ ನಾವು ಎಂಥಹ ನಾಗರಿಕ ಸಮಾಜದಲ್ಲಿ ಇದ್ದೇವೆ ಎಂದು ಮಾರ್ಮಿಕವಾಗಿ ನುಡಿದರು ಸುಳ್ಳನ್ನ ವಿಸ್ತಾರ ಮಾಡಲು ಸಾದ್ಯ ಅಗುತ್ತದೆ ಸತ್ಯವನ್ನ ವಿಸ್ತಾರ ಮಾಡಲು ಸಾದ್ಯ ಇಲ್ಲ ಸುಳ್ಳು ಕ್ಷಣಿಕ ಸಂತೋಷ ಕೊಡುತ್ತದೆ ಎಂದರುಮುಖ್ಯ ಅತಿಥಿಗಳಾಗಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ, ಕುಮಾರಿ ಸಹನಾ ಕುಂದರ್, ಶ್ರೀ ಕೆ ವಸಂತ ಸಾಲ್ಯಾನ್, ಮೊದಲಾದವರು ಉಪಸ್ಥಿತರಿದ್ದರು ಅಧ್ಯಕ್ಷತೆಯನ್ನು ಶಾಸಕರಾದ ಶ್ರೀ ಹರೀಶ್ ಪೂಂಜ ರವರು ವಹಿಸಿದರು.