ಸೊರಬ ತಾಲೂಕಿನಲ್ಲಿ ಇಂದು ಗಾಂಧಿ ಜಯಂತಿ ಪ್ರಯುಕ್ತ ಬೃಹತ್ ಜನಜಾಗೃತಿ ಜಾಥಾ ಮತ್ತು ನವಜೀವನ ಸದಸ್ಯರ ಅಭಿನಂದನಾ ಸಮಾವೇಶ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸೊರಬ ತಹಶೀಲ್ದಾರ್ ಶ್ರೀ ಹುಸೇನ್ ಸರಕಾವಸ್ ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಕಾಳಿಂಗರಾಜ್ ಎಂ.ಎಸ್ ವಹಿಸಿದ್ದರು. ಜಾಥಾ ಕಾರ್ಯಕ್ರಮಕ್ಕೆ ಶ್ರೀ ಜಿ ಪ್ರಶಾಂತ್ ಮೇಸ್ತ್ರಿ ಚಾಲನೆ ನೀಡಿದರು. ತಾಲೂಕು ಆರೋಗ್ಯಧಿಕಾರಿಗಳಾದ ಡಾ. ಪ್ರಭು ಕೆ ಸಾಹುಕಾರ್ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರ್ದೇಶಕರಾದ ಶ್ರೀ ಎ ಬಾಬು ನಾಯ್ಕ್, PSI ಶ್ರೀ ನಾಗರಾಜ್ ಸರ್, ಧರ್ಮಗುರುಗಳಾದ ಫಾದರ್ ರಾಬರ್ಟ್ ಡಿ’ಮೆಲ್ಲೋ, ಶ್ರೀ ವೀರೇಶ್ ಮೇಸ್ತ್ರಿ, ಶ್ರೀಮತಿ ಸುಲ್ತಾನ್ ಬೇಗಂ, ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀಮತಿ ಸುಧಾ ಶಿವಪ್ರಸಾದ್, ಶ್ರೀ ದಿನಕರ್ ಭಟ್ ಭಾವೆ, ಶ್ರೀ ಭರಮಗೌಡ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
