ಶಿವಮೊಗ್ಗ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ

Janajagurthi Vedike News

ಶಿವಮೊಗ್ಗ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯು ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಸೊಪ್ಪುಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಕಾರ್ಯದರ್ಶಿಗಳು ಕಳೆದ ಸಭೆಯ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ಈ ವರ್ಷದ ಗಾಂಧಿ ಜಯಂತಿ ಕಾರ್ಯಕ್ರಮದ ಅನುಷ್ಠಾನ ಮಾಡುವ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಮಾಡಲಾಯಿತು. ಜಿಲ್ಲೆಯಲ್ಲಿ ಒಟ್ಟು 3 ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ನಿರ್ಣಯಿಸಿ ದಿನಾಂಕ ನಿಗದಿ ಪಡಿಸಲಾಗಿದೆ.ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳು, ತರಬೇತುದಾರರ ಭಾಗವಹಿಸುವಿಕೆ, ನವಜೀವನ ಸಮಿತಿ ಅನುಪಾಲನಾ, ನವಜೀವನ ಪೋಷಕರ ಕಾರ್ಯವೈಖರಿ, ಮದ್ಯವರ್ಜನ ಶಿಬಿರಗಳು, ಮುಂದಿನ ಶಿಬಿರದ ಅನುಷ್ಠಾನ, ನವಜೀವನ ಸಮಾವೇಶ, ಶಿಬಿರದ ಮಾಸಿಕ ಸಭೆಯ ಬಗ್ಗೆ, ಪತ್ರಿಕಾ ಘೋಷ್ಟಿ, ಹಕ್ಕೊತ್ತಾಯ ಮಂಡನೆ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಸುದೀರ್ಘ ಚರ್ಚೆ, ಕ್ಷೇತ್ರದ ಕಾರ್ಯಕ್ರಮ ಸಮಗ್ರ ಪರಿಚಯ ಕಾರ್ಯಕ್ರಮದಲ್ಲಿ ಮಾಡುವ ಬಗ್ಗೆ ಚರ್ಚಿಸಲಾಯಿತು.ಜಿಲ್ಲಾ ವೇದಿಕೆಗೆ ನೂತನವಾಗಿ *ಹೊಸನಗರದ ವಕೀಲರಾದ ಮೋಹನ್ ಶೆಟ್ಟಿ, ಶ್ರೀಮತಿ ನಾಗರತ್ನ ದೇವರಾಜ್, ಶ್ರೀ ದೇವೇಂದ್ರಪ್ಪ, ಶಿವಮೊಗ್ಗ ತಾಲೂಕಿನ ಶ್ರೀಮತಿ ಮಮತಾ ಶಿವಣ್ಣರವರನ್ನು ಸೇರ್ಪಡೆ
ಮಾಡಲಾಯಿತು.ಜಿಲ್ಲಾ ವೇದಿಕೆಯ ನಿಕಟಪೂರ್ವ ಅದ್ಯಕ್ಷರು,ಜಿಲ್ಲಾ ವೇದಿಕೆಯ ಪದಾಧಿಕಾರಿಗಳು,ತಾಲೂಕು ಯೋಜನಾಧಿಕಾರಿಗಳು,ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.