ಚಿಕ್ಕೋಡಿ ಹಾಗೂ ಅಥಣಿ ಜಿಲ್ಲೆಯ ಜನಜಾಗೃತಿ ವೇದಿಕೆಯ ಕಾರ್ಯಕಾರಣಿ ಸಭೆ

Janajagurthi Vedike News

ಚಿಕ್ಕೋಡಿ ಹಾಗೂ ಅಥಣಿ ಜಿಲ್ಲೆಯ ಜನಜಾಗೃತಿ ವೇದಿಕೆಯ ಕಾರ್ಯಕಾರಣಿ ಸಭೆಯನ್ನು ಚಿಕ್ಕೊಡಿ ಯಲ್ಲಿ ನಡೆಸಲಾಯಿತು ಸಭೆಯನ್ನು ವೇದಿಕೆ ಸ್ಥಾಪಕ ಅಧ್ಯಕ್ಷರಾದ ಶ್ರೀ ಶ್ರೀಪಾಲ್ ಮುನ್ನೋಳ್ಳಿ ಹಾಗೂ ನೂತನ ಅಧ್ಯಕ್ಷರಾದ ಶ್ರೀ ಸಂಜಯ ನಾಡಗೌಡ ಇವರು ಸಭೆಯನ್ನು ಉದ್ಘಾಟನೆ ಮಾಡಿದರು. ಜನಜಾಗೃತಿ ವೇದಿಕೆಯ ಕಾರ್ಯದರ್ಶಿಯವರಾದ ವಿಟ್ಟಲ್ ಸಾಲಿಯಾನ ಹಿಂದಿನ ಸಭೆಯ ವರದಿ ಮಂಡನೆ ಹಾಗೂ ಹಿಂದಿನ ಸಭೆಯ ಖರ್ಚು ವೆಚ್ಚಗಳ ಮಂಡನೆ ಮಾಡಿದರು. ನಂತರ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯವರಾದ ಶ್ರೀ ಭಾಸ್ಕರ್ ಜನಜಾಗೃತಿ ಕಾರ್ಯಕ್ರಮಗಳ ಕುರಿತು ಹಾಗೂ ಜನಜಾಗೃತಿ ಕಾರ್ಯಕ್ರಮಕ್ಕೆ ಯೋಜನೆಯಿಂದ ದೊರೆಯಬಹುದಾದ ಅನುದಾನಗಳ ಕುರಿತು ಮತ್ತು ಅಕ್ಟೋಬರ್ ಎರಡರ ಗಾಂಧೀಜಿಯಂತಿ ಕಾರ್ಯಕ್ರಮದ ರೂಪರೇಷೆಗಳ ಕುರಿತು, ವಿಪತ್ತು ನಿರ್ವಹಣೆ, ನವ ಜೀವನ ಸಮಿತಿಗೆ ಬಲವರ್ಧನೆಗಳ ಬಗ್ಗೆ ಮಾಹಿತಿ ನೀಡಿದರು.ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು ಹಾಗೂ ಸ್ಥಾಪಕ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಲಾಯಿತು, ಸ್ಥಾಪಕ ಅಧ್ಯಕ್ಷರು ಯೋಜನೆಯ ಕಾರ್ಯಕ್ರಮಗಳ ಕುರಿತು ಹಾಗೂ ವೇದಿಕೆಯಲ್ಲಿ ಮುಂದೆ ನಡೆಸಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ಹಾಗೂ ತಮ್ಮ ಅವಧಿಯಲ್ಲಿ ಆದಂತ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಅಕ್ಟೋಬರ್ 2ರ ಗಾಂಧೀ ಜಯಂತಿ ಕಾರ್ಯಕ್ರಮವನ್ನು ಚಿಕ್ಕೋಡಿ ಹಾಗೂ ಅಥಣಿ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ದೊಡ್ಡಮಟ್ಟದಲ್ಲಿ ಆ ಯೋಜನೆ ಮಾಡುವಂತೆ ಮಾಹಿತಿ ನೀಡಿದರು, ಸಭೆಯಲ್ಲಿ ಅಥಣಿ ಜಿಲ್ಲಾ ನಿರ್ದೇಶಕಿ ಶ್ರೀಮತಿ ನಾಗರತ್ನ,ಜಿಲ್ಲಾ ಜನಜಾಗೃತಿ ವೇದಿಕೆಯ ಗೌರವಾನ್ವಿತ ಎಲ್ಲಾ ಪದಾಧಿಕಾರಿಗಳು ಸದಸ್ಯರು ಹಾಗೂ ಚಿಕ್ಕೋಡಿ/ಅಥಣಿ ಜಿಲ್ಲೆಯ ಎಲ್ಲಾ ಯೋಜನಾಧಿಕಾರಿಗಳು ಜಿಲ್ಲಾ ಪ್ರಭಂದಕರು, ಜನಜಾಗೃತಿ ಮೇಲ್ವಿಚಾರಕರು ಉಪಸ್ಥಿತರಿದ್ದರು.