ವಿವೇಕಾನಂದ ಕಾಲೇಜ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ‌ಸಿ. ಟ್ರಸ್ಟ್ ( ರಿ.) ಪುತ್ತೂರು ಇದರ ಮಾರ್ಗದರ್ಶನದಲ್ಲಿ, ಪ್ರಗತಿ ಬಂಧು-ಸ್ವ ಸಹಾಯ ಸಂಘಗಳ ಒಕ್ಕೂಟ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೇ ಪುತ್ತೂರು ವಲಯ ಇದರ ವತಿಯಿಂದ, ನರೇಂದ್ರ ವಿವೇಕಾನಂದ ಕಾಲೇಜ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ , ಪುತ್ತೂರಿನ ಲಿಟ್ಲ್ ಪ್ಲವರ್ ಶಾಲಾ ಶಿಕ್ಷಕರಾದ ಬಾಲಕೃಷ್ಣ ಪೋರ್ದಲ್ . ಮಾಹಿತಿ ಮಾರ್ಗದರ್ಶನ ಮಾಡಿದರು. ಧಕ್ಷಿಣ ಕನ್ನಡ 2 ಜಿಲ್ಲಾ ನಿರ್ದೇಶಕರು ಪ್ರವೀಣ್ ಕುಮಾರ್ ಪ್ರಸ್ತವಿಕ ಮಾತನಾಡಿದರು.. ಜನಜಾಗೃತಿ ಜಿಲ್ಲಾ ಅಧ್ಯಕ್ಷರು ಪದ್ಮನಾಭ ಶೆಟ್ಟಿ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. . ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾ ಶ್ಯಾನ್ ಬೋಗ್ ಅಧ್ಯಕ್ಷರು ವಹಿಸಿದರು.ಶಾಲಾ ಮುಖ್ಯಗುರುಗಳು, ಜನಜಾಗೃತಿ ತಾಲ್ಲೂಕು ಅಧ್ಯಕ್ಷರು ಲೋಕೇಶ್ಹೆ ಹೆಗ್ಡೆ ಜನಜಾಗೃತಿ ವಲಯ ಅಧ್ಯಕ್ಷರು ಸತೀಶ್ ನಾಯ್ಕ್, ವಲಯ ಮೇಲ್ವಿಚಾರಕರು, ಉಪನ್ಯಾಸಕರು, ಸೇವಾಪ್ರತಿನಿಧಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.