ಬೆಳ್ತಂಗಡಿ, ಗುರುವಾಯನಕೆರೆ, ಬಂಟ್ವಾಳ, ಬಜಪೆ, ಮಂಗಳೂರು ತಾಲೂಕಿನ ನವಜೀವನ ಸಮಿತಿ ಪೋಷಕರ ತರಬೇತಿ ಕಾರ್ಯಗಾರವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ರವರು ದೀಪ ಬೆಳಗಿಸುದರ ಮೂಲಕ ಉದ್ಘಾಟಿಸಿದರು.ಮಾನ್ಯ ಪ್ರಾದೇಶಿಕ ನಿರ್ದೇಶಕರು ಮಾತನಾಡುತ್ತಾ ನವಜೀವನ ಸಮಿತಿ ಸದಸ್ಯರ ಸಭೆಯ ಅನುಪಾಲನೆಯಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾದದ್ದು, ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪರಿಕಲ್ಪನೆಯ ನವ ಜೀವನ ಸಮಿತಿಯ ಬಲವರ್ಧನೆಗೆ ಪೋಷಕರ ಆಯ್ಕೆ ಹಾಗೂ ಉದ್ದೇಶವನ್ನು ವಿವರಿಸಿದರು. ಪೋಷಕರ ಜವಾಬ್ದಾರಿಗಳ ಬಗ್ಗೆ ತಿಳಿಸುತ್ತಾ ಜಿಲ್ಲಾ ವ್ಯಾಪ್ತಿಯಲ್ಲಿ ಹಾಗೂ ತಾಲೂಕುಗಳಲ್ಲಿ ನಡೆದ ಶಿಬಿರಗಳ ಅಂಕಿ ಅಂಶಗಳ ಸಹಿತ ಮಾಹಿತಿ ಪಡೆದು ಮೌಲ್ಯಮಾಪನ ಮಾಡುವ ಕುರಿತು ತಿಳಿಸಿದರು.ಪೋಷಕರು ಮನೆ ಭೇಟಿ ಮಾಡಬೇಕಾದ ರೀತಿ ಮತ್ತು ನವಜೀವನ ಸಮಿತಿಯನ್ನು ರಚಿಸುವ ಬಗ್ಗೆ ವಿವರಿಸಿದರು.ನವ ಜೀವನ ಸಮಿತಿ ಪೋಷಕರಿಗೆ ಸಿಗುವ ಗೌರವದನ ಹಾಗೂ ಅದನ್ನು ಪಡೆದುಕೊಳ್ಳುವ ರೀತಿಯ ಬಗ್ಗೆ ತಿಳಿಸಲಾಯಿತು.ನವಜೀವನೋತ್ಸವ ಹಾಗೂ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಸಂಘಟಿಸುವ ಕುರಿತು ವಿಶೇಷವಾಗಿ ಎಲ್ಲಾ ಪೋಷಕರು ನವಜೀವನ ಸಮಿತಿ ಸದಸ್ಯರ ಹಾಗೂ ಸಭೆ ನಡೆಸುದರ ಬಗ್ಗೆ ಪರಿಣಾಮವಾಗಿ ತರಬೇತಿಯನ್ನು ಪೋಷಕರಿಗೆ ನಡೆಸಿಕೊಟ್ಟರು.ದ ಕ 1 ಜಿಲ್ಲೆಯ ನಿರ್ದೇಶಕರಾದ ಶ್ರೀ ಮಹಾಬಲ ಕುಲಾಲ್ ರವರು ಅಕ್ಟೋಬರ್ 2 ಕಾರ್ಯಕ್ರಮದ ಪೂರ್ವತಯಾರಿ ಬಗ್ಗೆ ತಿಳಿಸಿದರು.ತರಬೇತಿ ಕಾರ್ಯಗಾರದ ನಿರ್ವಹಣೆಯನ್ನು ಜನಜಾಗೃತಿ ಕಾರ್ಯಕ್ರಮದ ಪ್ರಾದೇಶಿಕ ಯೋಜನಾಧಿಕಾರಿ ಶ್ರೀ ಗಣೇಶ್ ಆಚಾರ್ಯ ಹಾಗೂ ಮೇಲ್ವಿಚಾರಕ ನಿತೇಶ್ ಕೆ ಮಾಡಿದರು.ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಶ್ರೀ ಮಾಧವ ಗೌಡ ವಂದಿಸಿದರು.ಭಾಗವಹಿಸಿದ 68 ನವಜೀವನ ಸಮಿತಿ ಪೋಷಕರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು
