ಚನ್ನರಾಯಪಟ್ಟಣ ಜಿಲ್ಲಾ ಕಛೇರಿಯಲ್ಲಿ ಅಕ್ಟೋಬರ್ 2 ರ ಗಾಂಧಿ ಜಯಂತಿ ಆಚರಣೆ ಕುರಿತು ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ಸಭೆ

Janajagurthi Vedike News

ಚನ್ನರಾಯಪಟ್ಟಣ ಜಿಲ್ಲಾ ಕಛೇರಿಯಲ್ಲಿ ಅಕ್ಟೋಬರ್ 2 ರ ಗಾಂಧಿ ಜಯಂತಿ ಆಚರಣೆ ಕುರಿತು ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ಸಭೆಯನ್ನು ಮಾನ್ಯ ಪ್ರಾದೇಶಿಕ ನಿರ್ದೇಶಕರ ಉಪಸ್ಥಿತಿಯಲ್ಲಿ ಎಲ್ಲಾ ತಾಲೂಕಿನ ಜನಜಾಗೃತಿ ಸದಸ್ಯರು, ಜಿಲ್ಲಾ ನಿರ್ದೇಶಕರು, ತಾಲೂಕು ಮತ್ತು ಜಿಲ್ಲಾ ಯೋಜನಾಧಿಕಾರಿಗಳು, ಪ್ರಾದೇಶಿಕ ಕಛೇರಿಯ ಜನಜಾಗೃತಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಹಮ್ಮಿಕೊಂಡಿ ಚರ್ಚಿಸಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಅಕ್ಟೋಬರ್ 07-2023 ರಂದು ಕೃಷ್ಣರಾಜಪೇಟೆ ತಾಲೂಕಿನಲ್ಲಿ ಮಾಡಲು ತೀರ್ಮಾನಿಸಿ ಸಕಲ ಪೂರ್ವ ತಯಾರಿ ಬಗ್ಗೆ ಚರ್ಚಿಸಲಾಯಿತು ಹಾಗೂ 1)ಜನಜಾಗೃತಿ ಸಮಿತಿಗೆ ಸಂಘಟನೆಯ ಪ್ರಮುಖರನ್ನು ಆಯ್ಕೆ ಮಾಡಲು ತಿಳಿಸಲಾಯಿತು. 2)ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಜನಜಾಗೃತಿ ಸದಸ್ಯರು ಪಾಲ್ಗೊಳ್ಳಬೇಕೆಂದು ತಿಳಿಸಿದರು. 3) ಮದ್ಯವರ್ಜನಾ ಶಿಬಿರವನ್ನು ಆಯೋಜನೆ ಮಾಡುವಾಗ ಸಮಿತಿಯನ್ನು ಸರಿಯಾಗಿ ರಚನೆ ಮಾಡಲು ತಿಳಿಸಿದರು. 4)ನವಜೀವನೋತ್ಸವ ಕಾರ್ಯಕ್ರಮವನ್ನು ಶ್ರವಣಬೆಳಗೊಳ ಮತ್ತು ಹೊಳೆನರಸೀಪುರ ತಾಲೂಕಿಗೆ ತಲಾ ಒಂದರಂತೆ ಮಾಡಲು ತಿಳಿಸಲಾಯಿತು. 5) ಯೋಜನೆಯ ಸೌಲಭ್ಯಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. 6) ಹೊಸ ಜನಜಾಗೃತಿ ಸದಸ್ಯರ ಅನಿಸಿಕೆ ಮತ್ತು ಅಭಿಪ್ರಾಯ ಕೇಳಲಾಯಿತು ಎಲ್ಲಾ ಜನಜಾಗೃತಿ ಸದಸ್ಯರು ಮತ್ತು ಯೋಜನೆಯ ಕಾರ್ಯಕರ್ತರು 1 ನಾಣ್ಯದ 2 ಮುಖಗಳು ಇದ್ದಹಾಗೆ ಎಂದು ತಿಳಿಸಿದರು.