ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ

Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಧರ್ಮಸ್ಥಳ ಉಡುಪಿ ಜಿಲ್ಲಾ ಜನಜಾಗೃತಿ ಪದಾಧಿಕಾರಿಗಳ ಸಭೆಯನ್ನು ದಿನಾಂಕ 12.09.23ರಂದು ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಆರ್,ನವೀನ್ ಚಂದ್ರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಂದಾಪುರ-ಬೈಂದೂರು ತಾಲೂಕಿನ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷರಾದ ಶ್ರೀ ಅಪ್ಪಣ್ಣ ಹೆಗ್ಗಡೆಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಜನಜಾಗೃತಿ ಕಾರ್ಯದರ್ಶಿ/ ಜಿಲ್ಲಾ ನಿರ್ದೇಶಕರಾದ ಶ್ರೀ ಶಿವರಾಯ ಪ್ರಭು ಗತ ಸಭೆಯ ವರದಿಯನ್ನು ಮಂಡಿಸಿದರು. ಉಡುಪಿ ಜಿಲ್ಲಾ ವ್ಯಾಪ್ತಿಯ 9 ತಾಲೂಕಿನ ಯೋಜನಾಧಿಕಾರಿಗಳು ಪ್ರಸ್ತುತ ಆರ್ಥಿಕ ವರ್ಷದ ಜನಜಾಗೃತಿ ಗುರಿಸಾಧನೆ ಕುರಿತು ವರದಿ ಮಂಡಿಸಲಾಯಿತು. ಗಾಂಧಿ ಜಯಂತಿ ಕಾರ್ಯಕ್ರಮದ ಬಗ್ಗೆ,ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಕುರಿತು, ನವಜೀವನೋತ್ಸವ,ನವಜೀವನ ಸಮಿತಿ ಸದಸ್ಯರ ಮನೆ ಭೇಟಿ ಹಾಗೂ ನವಜೀವನ ಸಮಿತಿಗಳ ಬಲವರ್ಧನೆ,ಶೌರ್ಯ ವಿಪತ್ತು ಘಟಕಗಳ ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸದಸ್ಯರ ಬಳಕೆ ಕುರಿತು ಚರ್ಚಿಸಲಾಯಿತು ಹಾಗೂ ಜನಜಾಗ್ರತಿ ವೇದಿಕೆ ಸದಸ್ಯರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಸೂಚಿಸಿದರು. ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇ ಗೌಡರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹಿನ್ನೆಲೆ, ಸಂಸ್ಥೆಯ ದ್ಯೇಯೋದ್ದೇಶಗಳ ಬಗ್ಗೆ, ಹಿಂದಿನ ಸಭೆಯ ನಿರ್ಣಯಗಳ ಅನುಷ್ಠಾನ,ಯೋಜನೆ ಹಾಗೂ ಜನಜಾಗೃತಿ ವೇದಿಕೆ ಸದಸ್ಯರ ಸಮನ್ವಯದ ಕುರಿತುಮಾಹಿತಿ ನೀಡಿದರು. ಅಪ್ಪಣ್ಣ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಜನಜಾಗೃತಿ ವೇದಿಕೆ ಕುರಿತು ಮಾತನಾಡಿದರು. ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ನವೀನಚಂದ್ರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಎಲ್ಲಾ ತಾಲೂಕಿನ ಜನಜಾಗೃತಿ ವೇದಿಕೆ ಅಧ್ಯಕ್ಷರು, ಪಧಾದಿಕಾರಿಗಳು, ತಾಲೂಕಿನ ಯೋಜನಾಧಿಕಾರಿಗಳು ಉಪಸ್ಥಿತಿಯಿದ್ದರು