1719ನೇ ಮದ್ಯವರ್ಜನ ಶಿಬಿರದ ಕುಟುಂಬದ ದಿನ ಮತ್ತು ಸಮಾರೋಪ ಸಮಾರಂಭ

Janajagurthi Vedike News

1719ನೇ ಮದ್ಯವರ್ಜನ ಶಿಬಿರದ ಕುಟುಂಬದ ದಿನ ಮತ್ತು ಸಮಾರೋಪ ಸಮಾರಂಭ ಶ್ರೀ ಗುತ್ತಿ ರೇಣುಕಾಂಬ ದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಶ್ರೀ ಚಂದುವಲ್ಲಿ ಸೋಮಶೇಕರ್ ವಹಿಸಿ ಕಳೆದ 8ದಿನಗಳಿಂದ ದೇವಸ್ಥಾನದಲ್ಲಿ ದೊಡ್ಡ ಯಾಗ ನಡೆದಿದೆ. ಅದು ನಮ್ಮ ಕುಟುಂಬವನ್ನು ಬೇಳಗಳಿದೆ. ಮದ್ಯಪಾನ ಮಾಡುವವರ ಕುಟುಂಬ ಹಾಳು ತೀರ್ಥಹಳ್ಳಿ ತಾಲೂಕಿನಲ್ಲಿ ಹೆಚ್ಚಿನ ಮದ್ಯಪಾನ ಮತ್ತು ಮಾದಕ ವಸ್ತುಗಳು ವ್ಯಾಪಕವಾಗಿ ಹೇರಳವಾಗಿ ಸಿಗುತ್ತಲಿದೆ. ಇದನ್ನು ತಡೆಗಟ್ಟಲು ಇಂತಹ ಶಿಬಿರಗಳು ಸಹಕಾರಿ ಆಗಲಿದೆ ಎಂದು ತಿಳಿಸಿ ಶುಭ ಹಾರೈಕೆ ಮಾಡಿದರು. ನವಜೀವನವನ್ನು ಉದ್ಘಾಟನೆ ಮಾಡಿದ ಡಾ. ಜೀವೆಂದರ್ ಜೈನ್ ರವರು ಮಾತನಾಡಿ ಕ್ಷೇತ್ರದ ಕಾರ್ಯಕ್ರಮ ಪ್ರತಿ ಕುಟುಂಬದ ಅಭಿವೃದ್ಧಿಗೆ ಪೂರಕವಾಗಿ ನಿಸ್ವಾರ್ಥ ಸೇವೆಯನ್ನು ಜನರಿಗೆ ನೀಡುತಲಿದೆ. ಇವತ್ತು ಸ್ವಸ್ಥ ಸಮಾಜ ನಿರ್ಮಾಣ ಮಾಡುವುದು ನಮ್ಮ ಗುರಿ, ಗಾಂಧೀಜಿಯವರ ಕನಸು ನನಸು ಮಾಡಲು ಪೂಜ್ಯ ಹೆಗ್ಗಡೆಯವರು ಶ್ರಮಿಸುತ್ತಾ ಇದ್ದು ನಾವು ಅವರ ಜೊತೆ ಸೇರಿಕೊಂಡು ದುಶ್ಚಟಗಳ ವಿರುದ್ದ ಹೋರಾಡುವ ಮನುಕುಲಕ್ಕೆ ಅಂಟಿದ ಶಾಪದಿಂದ ವಿಮೋಚನೆ ಮಾಡುವ ಎಂದು ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಸೋಪ್ಪುಗುಡ್ಡೆ ರಾಘವೇಂದ್ರ, ಉಪಾಧ್ಯಕ್ಷರಾದ ಪಾಲಕ್ಷಪ್ಪ, ವೇದಿಕೆ ಸದಸ್ಯರಾದ ಅಶೋಕ್ ಮೂರ್ತಿ, ಶ್ರೀಮತಿ ಶಶಿಕಲಾ, ಜಿಲ್ಲಾ ನಿರ್ದೇಶಕರಾದ ಚಂದ್ರಶೇಕರ್ ಜೆ, ಸಮಿತಿಯ ಪದಾಧಿಕಾರಿಗಳು, ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕುಟುಂಬ ದಿನ ಕಾರ್ಯಕ್ರಮವನ್ನು ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯಸ್ ನಡೆಸಿದ್ದು, ಕುಟುಂಬದ ದಿನ ಮಾಹಿತಿ, ಕ್ಷೇತ್ರದ ಸಂದೇಶ, ಪೂಜ್ಯರ ಆಶಯವನ್ನು, ಕೌಟುಂಬಿಕ ಸಾಮರಸ್ಯವನ್ನು ಮೂಡಿಸಿದರು. ಒಟ್ಟು 50 ಮಂದಿ ಶಿಬಿರಾರ್ಥಿಗಳು ಇದರ ಪ್ರಯೋಜನ ಪಡಕೊಂಡು ನವಜೀವನಕ್ಕೆ ಪಾದಾರ್ಪಣೆ ಮಾಡಿದರು. ಯೋಜನಾಧಿಕಾರಿ ಮಂಜುನಾಥ ಕಾರ್ಯಕ್ರಮ ನಿರ್ವಹಣೆ ಮಾಡಿದ್ದು, ವಲಯದ ಮೇಲ್ವಿಚಾರಕರು ಶ್ರೀಮತಿ ಕಮಲಾಕ್ಷಿ ಸ್ವಾಗತಿಸಿದರು. ಸೇವಾಪ್ರತಿನಿಧಿ ಬಾಗ್ಯ ವಂದಿಸಿದರು. ಜನಜಾಗೃತಿ ಯೋಜನಾಧಿಕಾರಿಗಳು, ಆರೋಗ್ಯ ಸಹಾಯಕರು, ನವಜೀವನ ಸದಸ್ಯರು, ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.