ಧಾರವಾಡದ ಸಂಸ್ಥೆಯಲ್ಲಿ ನಡೆಯುತ್ತಿರುವ ನವ ಜೀವನ ಸದಸ್ಯರ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ತರಬೇತಿ

Janajagurthi Vedike News

ಧಾರವಾಡದ ಸಂಸ್ಥೆಯಲ್ಲಿ ನಡೆಯುತ್ತಿರುವ ನವ ಜೀವನ ಸದಸ್ಯರ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ತರಬೇತಿಯನ್ನು ಜಿಲ್ಲಾ ಜನಜಾಗೃತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಸರ್ ಅವರು ಉದ್ಘಾಟಿಸಿದರು. ಸಭೆಯಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯರಾದ ಸವಿತಾ ಅಮರ ಶೆಟ್ಟಿ, ತರಬೇತಿ ಸಂಸ್ಥೆಯ ನಿರ್ದೇಶಕರಾದ ಗವಿ ಸಿದ್ದಪ್ಪ ಸರ್ ಅವರು, ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿಗಳಾದ ಭಾಸ್ಕರ್ ಏನ್ ಸರ್ ಅವರು,ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಚನ್ನಪ್ಪ ಸರ್ ಅವರು, ಬಸವರಾಜ್ ಸರ್ ಅವರು, ಸಮಾಜ ಸೇವಕರಾದ ಹನುಮಂತಪ್ಪ ಸರ್ ಅವರು, ಜನಜಾಗೃತಿ ಮೇಲ್ವಿಚಾರಕರಾದ ಉಮೇಶ್ ರವರು ಸಭೆಯಲ್ಲಿ ಉಪಸ್ಥಿತರಿದ್ದರು.