ಭಾಲ್ಕಿ ಯೋಜನಾ ವ್ಯಾಪ್ತಿಯ ಭಾಲ್ಕಿ ಕಾರ್ಯಕ್ಷೇತ್ರದಲ್ಲಿ 1716ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಭಾಲ್ಕಿ ಯೋಜನಾ ವ್ಯಾಪ್ತಿಯ ಭಾಲ್ಕಿ ಕಾರ್ಯಕ್ಷೇತ್ರದಲ್ಲಿ 1716ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕಲಬುರ್ಗಿ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿಯವರಾದ ರಾಜೇಶ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಪಂ.ಪೂ.ಶ್ರೀ ಮೈ.ಘ.ಚ.ಡಾ// ಬಸವಲಿಂಗ ಪಟ್ಟದೇವರು ರವರು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಶ್ರೀ ಪ್ರವೀಣಕುಮಾರ್ (ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಬೀದರ ) ,ಶ್ರೀ ಜೈರಾಮ್ ದಾನ ಶೆಟ್ಟಿ (ಅಧ್ಯಕ್ಷರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಬಾಲ್ಕಿ)
ಶ್ರೀ ನಾಗಭೂಷಣ್ ಮಾಮಡಿ (ಅಧ್ಯಕ್ಷರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬಾಲ್ಕಿ), ಶ್ರೀ ಸೋಮನಾಥಪ್ಪ ಗುರುನಾಥಪ್ಪ ಅಷ್ಟೊರೆ (ಗೌರವ ಅಧ್ಯಕ್ಷರು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಬಾಲ್ಕಿ), ಶ್ರೀ ಸಂಜು ಕುಮಾರ್ ಬಾವಿಕಟ್ಟಿ (ದಲಿತ ಮುಖಂಡರು ಬಾಲ್ಕಿ), ಶ್ರೀ ಬಸವರಾಜ್ ಮಲ್ಲೇಶಿ (ಸಮಾಜ ಮುಖಂಡರು ಭಾಲ್ಕಿ), ಶ್ರೀ ಸಂತೋಷ್ ಬಿ.ಜಿ. (ಜಿಲ್ಲಾ ವರದಿಗಾರರು ಭಾರತ ವೈಭವ ಕನ್ನಡ ದಿನಪತ್ರಿಕೆ ಬೀದರ್), ಶ್ರೀ ಕವಿತಾ ಓಂಕಾರ್ ಮಚಕೋರಿ (ಅಧ್ಯಕ್ಷರು ಸಹಾರಾ ಸಂಸ್ಥೆ (ಎನ್.ಜಿ.ಓ)ಭಾಲ್ಕಿ)
ಶ್ರೀ ಚಂದ್ರಕಾಂತ್ ನೇಳಗೆ (ಅಧ್ಯಕ್ಷರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಕಲವಾಡಿ), ಶ್ರೀ ಶರಣಪ್ಪ ಬಿರಾದಾರ್ (ಸಮಾಜ ಸೇವಕರು), ಶ್ರೀರಾಚಂದ ವಘಮಾರೆ (ಸಮಾಜ ಸೇವಕರು) ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವು ಲೋಖಕಡೆ(ಅಧ್ಯಕ್ಷರು, 1716ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ,ಭಾಲ್ಕಿ)ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮದ್ಯವರ್ಜನ ಶಿಬಿರಾಧಿಕಾರಿಯವರಾದ ಶ್ರೀ ದಿನೇಶ್ ಮರಾಠಿ ,ಆರೋಗ್ಯ ಸಹಾಯಕರು ವೇಂಕಟಶ್, ಭಾಲ್ಕಿ ತಾಲೂಕು ಯೋಜನಾಧಿಕಾರಿಗಳು ಸುಬ್ರಮಣ್ಯ ಸರ್ ಕಲಬುರ್ಗಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರು ಮಲ್ಲೇಶಪ್ಪ ಕೂಡಿ ಹಾಗೂ ನವಜೀವನ ಸಮಿತಿ ಸದಸ್ಯರು,ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು/ಪದಾಧಿಕಾರಿಗಳು,ಪ್ರಗತಿಬಂಧು/ಸ್ವಸಹಾಯ ಸಂಘದ ಸದಸ್ಯರು, ವಲಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು , ಜ್ಞಾನವಿಕಾಸ ಸಮನ್ವಯಾಧಿಕಾರಿ, ತಾಲೂಕಿನ ಸೇವಾಪ್ರತಿನಿಧಿಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.