ಬದುಕು ರೂಪಿಸುವ 1715 ಮಧ್ಯವರ್ಜನ ಶಿಬಿರ ಉದ್ಘಾಟನೆ

Janajagurthi Vedike News

ರಾಮದುರ್ಗ ತಾಲೂಕಿನ ಸುನ್ನಾಳ 1715 ನೇ ಶಿಬಿರ ವಿದ್ಯುಕ್ತವಾಗಿ ಚಾಲನೆಗೊಂಡಿತು. ಸುಮಾರು 105 ಶಿಬಿರಾರ್ಥಿಗಳು ಕೇವಲ ರಾಮದುರ್ಗದವರೇ ಆಗಮಿಸಿರುವುದು ವಿಶೇಷವಾಗಿದೆ. ಕಾರ್ಯಕ್ರಮವನ್ನು ಶ್ರೀ ವೈಎಚ್ ಪಾಟೀಲ್ ಅಧ್ಯಕ್ಷರು ಕೃಷಿಕ ಸಮಾಜ ಉದ್ಘಾಟನೆಯನ್ನು ಮಾಡಿ ಶಿಬಿರಕ್ಕೆ ಚಾಲನೆಯನ್ನು ನೀಡಿ ಭಗವಂತನ ಆಶೀರ್ವಾದ ಪಡೆದುಕೊಳ್ಳಲು ಸಮಯ ಬರಬೇಕು ಆ ಸಮಯ ಇದೀಗ ನಿಮಗೆ ಬಂದಿದೆ ಎಂದು ಆಶಿಸಿ ಶುಭ ಹಾರೈಕೆ ಮಾಡಿದರು. ದಿವ್ಯ ಸಾನಿಧ್ಯವನ್ನು ಶ್ರೀ ಶ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮುಳ್ಳೂರು ಇವರು ವಹಿಸಿಕೊಂಡಿದ್ದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಇಂತಹ ಶಿಬಿರಗಳಿಂದ ಅನೇಕ ಬಡ ಕುಟುಂಬಗಳು ಉತ್ತಮ ಸುಖ ಸಂಸಾರವನ್ನು ಮಾಡುವುದಕ್ಕೆ ಸಹಕಾರಿಯಾಗಿದೆ ಹೀಗೆ ಎಲ್ಲರಿಗೂ ಮಂಜುನಾಥ ಸ್ವಾಮಿಯ ಅನುಗ್ರಹ ಇರಲಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆಯವರು ಇನ್ನು ಅನೇಕ 10 ಹಲವು ಶಿಬಿರಗಳನ್ನು ಮಾಡಿ ಇನ್ನು ಸಾವಿರ ಲಕ್ಷ ಕುಟುಂಬಗಳ ಅಭಿವೃದ್ಧಿಗೆ ವ್ಯಸಮನ ಮುಕ್ತ ಕುಟುಂಬವನ್ನು ನಿರ್ಮಾಣ ಮಾಡುವುದರಲ್ಲಿ ಸಹಕರಿಸಲಿ ಹಾಗೂ ಅವರಿಗೆ ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಬಿ ಎಂ ಪಾಟೀಲ್ ಅಧ್ಯಕ್ಷರು ಧೀರ ಮಾರುತೇಶ್ವರ ದೇವಸ್ಥಾನ ಕಮಿಟಿ ಸುನ್ನಾಳ ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀ ಲವಕುಮಾರ್ ಜಿಲ್ಲಾ ನಿರ್ದೇಶಕರು ಸಂದರ್ಭಕ್ಕೆ ಪೂರಕವಾಗಿ ಮಾಹಿತಿ ನೀಡಿ ಶುಭ ಹಾರೈಸಿದರು ಅಶೋಕ್ ಕುಲ್ಗೋಡ್ ನಿಕಟ ಪೂರ್ವ ಅಧ್ಯಕ್ಷರು ಬೆಳಗಾವಿ ಎಚ್ಆರ್ ಲವಕುಮಾರ್ ನಿರ್ದೇಶಕರು ಸುರೇಶ್ ಕಲ್ಲೂರು ನಿವೃತ್ತ ಶಿಕ್ಷಕರು ರಾಮದುರ್ಗ, ರಮೇಶ್ ಟಿ ಜಲಗೇರಿ ಉಪಾಧ್ಯಕ್ಷರು ಜಿಲ್ಲಾ ಜನ ಜಾಗೃತಿ ವೇದಿಕೆ ಬೆಳಗಾವಿ 2, ರುದ್ರಪ್ಪ ಜಿ ವಜ್ರಮಟ್ಟಿ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ 2, ಜಿಬಿ ರಂಗನಗೌಡರು ಸದಸ್ಯರು ಜಿಲ್ಲಾ ಜನಜಾಗ್ರತಿ ವೇದಿಕೆ ಬೆಳಗಾವಿ2,ದಯಾನಂದ್ ಶಿರೂರು ನಿವೃತ್ತ ವೈದ್ಯಾಧಿಕಾರಿಗಳು,ಸುರೇಬಾನ ಪ್ರಕಾಶ್ ರಾಮಚಂದ್ರಪ್ಪ ಸುಳಿಭಾವಿ, ಉಪಸ್ಥಿರಿರುವಂತ ಎಲ್ಲಾ ಗಣ್ಯರು ಶಿಬಿರಕ್ಕೆ ಶುಭ ಹಾರೈಕೆ ಮಾಡಿದರು. ಜನಜಾಗೃತಿ ಕಾರ್ಯಕ್ರಮಗಳ ಯೋಜನಾಧಿಕಾರಿ ಭಾಸ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು ಮತ್ತು ಶಿಬಿರ ನೊಂದವಣಿಗೆ ಪೂರಕ ವಿಚಾರಗಳನ್ನು ತಿಳಿಸಿದರು.
ಕಾರ್ಯಕ್ರಮವನ್ನು ಬಸಪ್ಪ ಮೇಲ್ವಿಚಾರಕರು ನಿರೂಪಿಸಿ ಸಚಿನ್ ಯೋಜನಾಧಿಕಾರಿಗಳು ಸ್ವಾಗತಿಸಿದರು.ಸಂತೋಷ್ ಕೆ ಮೇಲ್ವಿಚಾರಕರು ವಂದನಾರ್ಪಣೆ ಮಾಡಿದರು. ಸಂದರ್ಭ ಶಿಬಿರ ಅಧಿಕಾರಿ ರಾಜೇಶ್, ಮೇಲ್ವಿಚಾರಕರಾದ ಉಮೇಶ್, ಆರೋಗ್ಯ ಸಹಾಯಕಿ ಶ್ರೀಮತಿ ನೇತ್ರಾವತಿ, ಸೇವಾ ಪ್ರತಿನಿಧಿಗಳು, ನವಜೀವನ ಸದಸ್ಯರು ಉಪಸ್ಥಿತರಿದ್ದರು.