ಮಲೇಬೆನ್ನೂರು ಯೋಜನಾಕಛೇರಿ ವ್ಯಾಪ್ತಿಯ ಕೊಮಾರನಹಳ್ಳಿಲ್ಲಿ ಜರಗಿದ ಮದ್ಯ ವರ್ಜನ ಶಿಬಿರದ 8ನೇ ದಿನದ ಸಮಾರೋಪ ಸಮಾರಂಭದಲ್ಲಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಪಾಟೀಲ್ ಸರ್ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಾಗೆ ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀ ಶಾರದಾನಂದಾಜಿ ಮಹಾರಾಜ್ ಸ್ವಾಮೀಜಿಯವರು ಎಲ್ಲರಿಗೂ ಆಶೀರ್ವಚನ ಮಾಡಿದರು. ಹಾಗೆ ಈ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ನಿರ್ದೇಶಕರಾದ ವಿಜಯ ಕುಮಾರ್ ನಾಗನಾಳ ಸರ್ ಅವರು ಎಲ್ಲಾ ಶಿಬಿರಾರ್ಥಗಳಿಗೆ ಶುಭ ಕೋರಿದರು.ಈ ಒಂದು ಸಮಯದಲ್ಲಿ ಕಾರ್ಯಕ್ರಮದಲ್ಲಿ ನಿಖಿಲ್ ಕೊಂಡಜ್ಜಿ ಸರ್ ಅವರು ಕೂಡ ಶುಭ ಹಾರೈಸಿದರು,ಹಾಗೆ ಮಾನ್ಯ ಜನಜಾಗೃತಿ ವೇದಿಕೆ ಯೋಜನಾಧಿಕಾರಿಯವರಾದ ನಾಗರಾಜ್ ಸರ್ ಇವರು ಎಲ್ಲರಿಗೂ ಮಾಹಿತಿ ಮಾರ್ಗದರ್ಶನ ನೀಡಿದರು. ಈ ಸಮಯದಲ್ಲಿ ಮಾನ್ಯ ಯೋಜನಾಧಿಕಾರಿಯವರಾದ ವಸಂತ್ ದೇವಾಡಿಗ ಸರ್ ಪುರಸಭೆ ಮುಖ್ಯಾಸ್ಥರು ಸುರೇಶ ಅಣ್ಣ ಇವರು ಶುಭ ಕೋರಿದರು.ಪತ್ರಕರ್ತ ಮಿತ್ರರು,ಊರಿನ ಗಣ್ಯ ವ್ಯಕ್ತಿಗಳು ,ವಕ್ಕೂಟದ ಅದ್ಯಕ್ಷರು ಹಾಗೂ ಸದಸ್ಯರು,ಎಲ್ಲಾ ವಲಯದ ಮೇಲ್ವಿಚಾರಕರು ಹಾಗೂ ಸೇವಪ್ರತಿನಿಧಿಯವರು ಶಿಬಿರಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
