ಕಲಬುರಗಿ ಜಿಲ್ಲೆಯ ಕಮಲಾಪುರ ಯೋಜನಾ ಕಛೇರಿ ವ್ಯಾಪ್ತಿಯಲ್ಲಿ ಕಮಲನಗರ, ರಾಮತೀರ್ಥ ವಲಯದಲ್ಲಿ 1708 ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ ಕಾರ್ಯಕ್ರಮ

Janajagurthi Vedike News

ಕಲಬುರಗಿ ಜಿಲ್ಲೆಯ ಕಮಲಾಪುರ ಯೋಜನಾ ಕಛೇರಿ ವ್ಯಾಪ್ತಿಯಲ್ಲಿ ಕಮಲನಗರ, ರಾಮತೀರ್ಥ ವಲಯದಲ್ಲಿ 1708 ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗಣಜಲಖೇಡದ ಪೂಜ್ಯ ಶ್ರೀ ನಾಗೇಶ ಮುತ್ಯಾ ರವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಶಿವಾನಂದ ಪಿಸ್ತಿ ಉಪಮಹಾಪೌರರು, ಮಹಾನಗರ ಪಾಲಿಕೆ ಕಲಬುರಗಿ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶರಣು ಗುತ್ತೆದಾರ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ರಾಮತೀರ್ಥ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ ಸುವರ್ಣ ಸರ್ , ಪ್ರಾದೇಶಿಕ ಕಛೇರಿಯ ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳಾದ ಶ್ರೀ ರಾಜೇಶ ಕೆ, ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಕಲ್ಲನಗೌಡ ಎಸ್, ಸಬ್ ಅರ್ಬನ್ ಪೊಲೀಸ್ ಠಾಣೆಯ ASI ಶ್ರೀ ಪುಂಡಲಿಕ ಕೆ , ವ್ಯವಸ್ಥಾಪನಾ ಸಮಿತಿ ಗೌರವ ಸಲಹೆಗಾರರಾದ ಶ್ರೀ ಅನಿಲಕುಮಾರ ಡಾಂಘೆ, ಉಪಾಧ್ಯಕ್ಷರಾದ ಶ್ರೀ ಆನಂದರಾವ್ ಚಿಂಚೋಳಿ, ಶ್ರೀ ಸುಭಾಷ ಮಹಾರಾಜರು ಶಿವದಾಸ ಮಠ ಬ್ರಹ್ಮಪುರ, ಶ್ರೀ ಸೂರ್ಯಕಾಂತ ಅವರಾದ ಬಿ, ಶ್ರೀ ರಮೇಶ ಬಿದನೂರ, ಶ್ರೀ ರವಿ ನೀಲೂರು, ಶಿಬಿರಾಧಿಕಾರಿ ಶ್ರೀ ಕುಮಾರ ಟಿ, ಆರೋಗ್ಯ ಸಹಾಯಿಕಿ ಶ್ರೀಮತಿ ಜಯಲಕ್ಷ್ಮೀ, ಶ್ರೀ ಸಂತೋಷ, ಕೃಷಿ ಮೇಲ್ವಿಚಾರಕರಾದ ಶ್ರೀ ವೀರೇಶ ಎಸ್ ನಿರೂಪಿಸಿದರು, ಶ್ರೀ ಈಶ್ವರಗೌಡ ವಂದಿಸಿದರು.