ಡಾ || ಮಹಾಂತ ಶಿವಯೋಗಿ ಮಹಾಸ್ವಾಮೀಜಿಗಳ ಜನ್ಮ ದಿನಾಚರಣೆ ಅಂಗವಾಗಿ ರಾಮದುರ್ಗ ತಾಲ್ಲೂಕಿನ ರಾಮದುರ್ಗ ನಗರದ ಶ್ರೀ ಬಸವೇಶ್ವರ ಸ್ಟೇಟ್ ಪ್ರೌಢ ಶಾಲೆಯಲ್ಲಿ ಇಂದು ಶ್ರೀ ಗಳ ಜನ್ಮ ದಿನಾಚರಣೆ ಹಾಗೂ ವ್ಯಸನ ಮುಕ್ತ ದಿನಾಚರಣೆ ಮತ್ತು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು ಮಾನ್ಯ ಜಿಲ್ಲಾ ನಿರ್ದೇಶಕರಾದ ಲವಕುಮಾರ್ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆಯ ನಿಕಟಪೋರ್ವ ಅಧ್ಯಕ್ಷರಾದ. ಮಾನ್ಯ ಅಶೋಕ್ ಕುಲಗೋಡು , ಉಪಾಧ್ಯಕ್ಷರಾದ ರಮೇಶ ಜಲಗೇರಿ,ಶಿಕ್ಷಣ ಸಂಸ್ಥೆಯ ಉಪ ಪ್ರಾಂಶುಪಾಲರಾದ ಮಾನ್ಯಹೆಚ್.ಎಂ.ದಾಸರ್ ಮಾನ್ಯಯೋಜನಾಧಿಕಾರಿಗಳಾದ ಸಚಿನ್ ಮತ್ತು ಸ್ವಾಸ್ತ್ಯ ಸಂಕಲ್ಪ ಸಂಪನ್ಮೂಲ ವ್ಯಕ್ತಿಗಳಾದ ಮಾನ್ಯ ಕಲ್ಯಾಣ್ ಶೆಟ್ಟಿ, ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದು ಇಂದು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು
