ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಪುಂಜಾಲಕಟ್ಟೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಮಟ್ಟದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶರತ್ ಕುಮಾರ್ ಉದ್ಘಾಟಿಸಿದರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಬಾಗವಹಿಸಿ ಮಾತನಾಡುತ್ತಾ ಮದ್ಯ ಪಾನ ಮತ್ತು ಮಾದಕ ವಸ್ತುಗಳ ಚಟ ಒಂದು ರೋಗ ಅಪಗಾತ , ಆತ್ಮಹತ್ಯೆ ಮೊದಲಾದ ಗಟನೆ ಗಳೂ ಮದ್ಯಪಾನ ದಿಂದಲೇ ಹೆಚ್ಚಾಗಿ ನಡೆಯುತ್ತದೆ ವಿದ್ಯರ್ಥಿಗಳು ಓದುವ ವಯಸ್ಸಿನಲ್ಲಿ ದಾರಿ ತಪ್ಪಬಾರದು ತಮ್ಮ ಬದುಕಿನಲ್ಲಿ ಕಪ್ಪು ಚುಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು ವಿದ್ಯಾರ್ಥಿಗಳು ಯಶಸ್ವಿ ಆಗುವ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು ಜಿಲ್ಲಾ ನಿರ್ದೇಶಕರಾದ ಶ್ರೀ ಮಹಾಬಲ ಕುಲಾಲ್ ಜನ ಜಾಗೃತಿ ವಲಯದ ಅದ್ಯಕ್ಷ ರಾದ ಪದ್ಮನಾಭ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
