ಮೈಸೂರು ಪ್ರಾದೇಶಿಕ ವಿಭಾಗದ ಮೈಸೂರು ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ

Janajagurthi Vedike News

ಮೈಸೂರು ಪ್ರಾದೇಶಿಕ ವಿಭಾಗದ ಮೈಸೂರು ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯನ್ನು ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಶೆಟ್ಟಿ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಜಯರಾಮ್ ನಲ್ಲಿತ್ತಾಯ, ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಮಮತಾ ರಾವ್. ಹಾಗೂ ಜಿಲ್ಲಾ ಜನಜಾಗೃತಿ ವೇಧಿಕೆಯ ಸದಸ್ಯರು,ಕ್ಷೇತ್ರ ಯೋಜನಾಧಿಕಾರಿ & ಜನಜಾಗೃತಿ ಯೋಜನಾಧಿಕಾರಿಗಳ ಉಪಸ್ಥಿಯಲ್ಲಿ ಸಭೆ ನಡೆಸಿ ಈ ಕೆಳಗಿನಂತೆ ವಿಷಯಗಳ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರು ಮಾಹಿತಿಯನ್ನು ನೀಡುತ್ತಾ ಜನಜಾಗೃತಿ ವೇದಿಕೆಯ ಸದಸ್ಯರ ಸೇವೆ ಶ್ಲಾಘನೀಯವಾದದ್ದು ಸಮುದಾಯದಲ್ಲಿ ಜನಜಾಗೃತಿಗೆ ಸಂಬಂಧ ಪಟ್ಟ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವಂತಹ ಅಗತ್ಯತೆಗಳಿದ್ದು ಈ ಬಗ್ಗೆ ನಾವು ಈ ವರ್ಷದಲ್ಲಿ ವಿಶೇಷವಾದಂತಹ ಕ್ರಿಯಾ ಯೋಜನಗಳನ್ನು ಹಾಕಿಕೊಂಡಿದ್ದೇವೆ ಎಂದು ತಿಳಿಸಿರುತ್ತಾರೆ. ಮೇ.31.. ವಿಶ್ವ ತಂಬಾಕು ವಿರೋಧಿ ದಿನಾಚರಣೆ ಪ್ರತಿ ತಾಲೂಕಿನಲ್ಲಿ ಎರಡೆರಡು ಕಾರ್ಯಕ್ರಮ ಈಗಾಗಲೇ ನಡೆಸಲಾಗಿರುವ ಬಗ್ಗೆ ಚರ್ಚೆ ನಡೆಸಲಾಯಿತು ಜೂನ್.26 ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಪ್ರತಿ ತಾಲೂಕಿನಲ್ಲಿ ಎರಡೆರಡು ಕಾರ್ಯಕ್ರಮವನ್ನು ಮಾಡುವ ರೀತಿಯಲ್ಲಿ ಚರ್ಚಿಸಲಾಯಿತು.ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ: ತಾಲೂಕಿನಲ್ಲಿ ಹತ್ತತ್ತು ಅನುದಾನದ ಕಾರ್ಯಕ್ರಮವನ್ನು ಶಾಲಾ ಕಾಲೇಜುಗಳನ್ನು ಗುರುತಿಸಿ ಮಾಡೋದು ಜಿಲ್ಲೆಯಲ್ಲಿ ಈ ವರ್ಷದ ಕ್ರಿಯ ಯೋಜನೆ ಪ್ರಕಾರ 3ಮಧ್ಯವರ್ಜನ ಶಿಬಿರ ಗಳಿದ್ದು ಈಗಾಗಲೇ 2 ಮಧ್ಯವರ್ಜನ ಶಿಬಿರ ಅರಸೀಕೆರೆ ಮತ್ತು ಬೇಲೂರು ತಾಲೂಕಿನಲ್ಲಿ ನಡೆದಿದ್ದು ಬಾಕಿ ಉಳಿದಂತಹ 1 ಶಿಬಿರಗಳನ್ನು ಅಚ್ಚುಕಟ್ಟಾಗಿ ಕಡಿಮೆ ಖರ್ಚಿನಲ್ಲಿ ವಸ್ತುರೂಪದಲ್ಲಿ ದೇಣಿಗೇನು ಪಡೆದು ಮಾಡುವ ಬಗ್ಗೆ ಚರ್ಚಿಸಲಾಯಿತು. ಪ್ರತಿ ತಾಲೂಕಿನಿಂದ ಕನಿಷ್ಠ 05 ಮಂದಿ ಆಸಕ್ತ ನವ ಜೀವನ ಸಮಿತಿ ಸದಸ್ಯರನ್ನು ಗುರುತಿಸಿ ಸ್ವಉದ್ಯೋಗ ತರಭೇತಿಯನ್ನು HRTC ಮೈಸೂರು ಇಲ್ಲಿ ಆಯೋಜನೆ ಮಾಡುವ ಬಗ್ಗೆ ಚರ್ಚಿಸಲಾಯಿತು. ನವಜೀವನ ಸಮಿತಿಯ ಬಲವರ್ಧನೆಗಾಗಿ ಪ್ರತಿಯೊಂದು ತಾಲೂಕಿನಿಂದ ವಲಯಕ್ಕೆ ಒಬ್ಬ ಸೇವಾ ಪ್ರತಿನಿಧಿಯವರನ್ನ ಪೋಷಕರಾಗಿ ಆಯ್ಕೆ ಮಾಡಿ ಅವರಿಗೆ ಜಿಲ್ಲಾ ಮಟ್ಟದಲ್ಲಿ ಒಂದು ದಿನದ ತರಬೇತಿ ಮಾಡುವ ಬಗ್ಗೆ ಚರ್ಚಿಸಲಾಯಿತು. ಪ್ರತಿ ತಾಲೂಕಿನಲ್ಲಿ ಎರಡು ನವಜೀವನೋತ್ಸವ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾಗಿ ತಾಲೂಕಿನಲ್ಲಿ ಓರ್ವ ವಕೀಲರನ್ನು ಆಯ್ಕೆ ಮಾಡುವ ತೀರ್ಮಾನಿಸಲಾಯಿತು. ಬೇಲೂರು ಮತ್ತು ಹಳೇಬೀಡು ಪ್ರವಾಸ ತಾಣವಾಗಿದ್ದು ತಾಲೂಕಿನ ಪಟ್ಟಣ ಪ್ರದೇಶದ ಆಟೋ ಚಾಲಕರನ್ನು ಇನ್ನಿತರ ಟೂರಿಸ್ಟ್ ವಾಹನದ ಚಾಲಕಮಾಲಕರನ್ನು ಸೇರಿಸಿ ಜನಜಾಗ್ರತಿ,ಪೊಲೀಸ್ ಇಲಾಖೆ, ಆರ್ ಟಿ ಓ, ಪ್ರವಾಸೋದ್ಯಮ ಇಲಾಖೆ, ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ದುಶ್ಚಟದಿಂದ ಸಮಾಜದ ಮೇಲೆ ಆಗುವಂತಹ ದುಷ್ಪರಿಣಾಮಗಳು ಬಗ್ಗೆ ಹಾಗೂ ದುಶ್ಚಟ ಮಾಡಿಕೊಂಡು ವಾಹನ ಚಲಾವಣೆಯನ್ನು ಮಾಡಿದಂತಹ ಸಂದರ್ಭದಲ್ಲಿ ಆಗುವಂತಹ ಅನಾಹುತಗಳ ಬಗ್ಗೆ, ಚಾಲಕರ ಪಾಲಿಸಬೇಕಾದಂತ ನಿಯಮಗಳ ಬಗ್ಗೆ ಒಂದು ದಿನದ ಮಾಹಿತಿ ಕಾರ್ಯಗಾರವನ್ನು ಅಗಸ್ಟ ಅಂತ್ಯದೊಳಗೆ ಹಮ್ಮಿಕೊಳ್ಳುವಂತೆ ಚರ್ಚಿಸಲಾಯಿತು ತಾಲೂಕು ಮಟ್ಟದಲ್ಲಿ ಜನಜಾಗೃತಿ ಜನಜಾಗೃತಿ ಪದಾಧಿಕಾರಿಗಳನ್ನು,ಸ್ವಾಸ್ಥ್ಯ ಸಂಕಲ್ಪ ತರಭೇತುದಾರರನ್ನು ನವಜೀವನ ಸಮಿತಿ ಅಧ್ಯಕ್ಷರನ್ನು ಸೇರಿಸಿ ಪ್ರತಿ 03 ತಿಂಗಳಿಗೊಮ್ಮೆ ಸಭೆಯನ್ನು ನಡೆಸಿ ಕ್ರಿಯಾ ಯೋಜನೆ ಬಗ್ಗೆ ಚರ್ಚಿಸಿ ಅನುಷ್ಠಾನ ಮಾಡುವುದರ ಬಗ್ಗೆ ನಿರ್ಣಯಿಸಲಾಯಿತು. ಗಾಂಧಿಜಯಂತಿ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ಹಕ್ಕೊತ್ತಾಯವನ್ನು ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ನೀಡುವ ಬಗ್ಗೆ ಚರ್ಚಿಸಲಾಯಿತು ಶಾಲಾ ಕಾಲೇಜುಗಳಲ್ಲಿ ಸ್ವಸ್ತಂಕಲ್ಪ ಕಾರ್ಯಕ್ರಮ ನಡೆಸಿದ ನಂತರ ಶಾಲಾ ಕಾಲೇಜು ಆಡಳಿತ ಮಂಡಳಿಯವರಲ್ಲಿ ಅನುಮತಿಯನ್ನು ಪಡೆದುಕೊಂಡು ಬಿತ್ತಿಪತ್ರವನ್ನು ಗೋಡೆಗೆ ಅಂಟಿಸುವಂತದ್ದು ಹಾಗೂ ದುಶ್ಚಟದ ವಿರುದ್ಧ ಜಾಗೃತಿ ಮೂಡಿಸುವ ಬ್ಯಾನರ್ ಗಳನ್ನು ಹಾಕು ಅಂತ ಚರ್ಚಿಸಲಾಯಿತು. ಪ್ರತಿ ತಾಲೂಕಿನಲ್ಲಿ ಮೂರು ಜನ ಸಾಹಸ ಕಲ್ಪ ತರಬೇತುದರನ್ನ ಆಯ್ಕೆ ಮಾಡಿ ಪ್ರಾದೇಶಿಕಚೇರಿಯಲ್ಲಿ ದಿನಾಂಕ 24 /7/23 ರಂದು ತರಬೇತಿ ಕೊಡುವ ಬಗ್ಗೆ ಚರ್ಚಿಸಲಾಯಿತು.ಪ್ರತಿ ತಾಲೂಕಿನಲ್ಲಿ ಕನಿಷ್ಠ ಆರು ಮಂದಿ ವೇದಿಕೆಯ ಸದಸ್ಯರಿರುವಂತೆ ಚರ್ಚಿಸಲಾಯಿತು ಹಾಗೂ ತಾಲೂಕಿನಲ್ಲಿ ಕನಿಷ್ಠ ಒಬ್ಬ ಮಹಿಳೆಯರನ್ನಾದರೂ ಆಯ್ಕೆ ಮಾಡುವ ಚರ್ಚಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಒಂದು ತಾಲೂಕನ್ನು ಗುರುತಿಸಿದ ಮಹಿಳಾ ಸಮಾವೇಶ ಮಾಡುವ ಬಗ್ಗೆ ಚರ್ಚಿಸಲಾಯಿತು. ಮುಂದಿನ ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯನ್ನು ಅರಸಿಕೆರೆ ತಾಲೂಕಿನ ನಡೆಸುವುದು ಚರ್ಚಿಸಲಾಯಿತು. ಇದುವರೆಗೆ ಸಕಲೇಶಪುರ ಮತ್ತು ಆಲೂರು ತಾಲೂಕು ಒಂದೇ ಯೋಜನ ಕಚೇರಿ ಇದ್ದು ಇನ್ನು ಆಲೂರು ಯೋಜನ ಕಚೇರಿಯಾಗಿ ವಿಂಗಡಿಸಿ ಅಲ್ಲಿ ಜನಜಾಗೃತಿ ಕಾರ್ಯಕ್ರಮ ಮಾಡುವ ಬಗ್ಗೆ ಚರ್ಚಿಸಲಾಯಿತು. ಪ್ರತಿ ಸೋಮವಾರ ಸಂಜೆ7 ರಿಂದ 8 ಗಂಟೆ ತನಕ ಮೈಸೂರು ಪ್ರಾದೇಶಿಕ ವ್ಯಕ್ತಿಯ ನವ ಜೀವನ ಸಮಿತಿ ಸದಸ್ಯರ ಫ್ರೀ ಕಾನ್ಫರೆನ್ಸ್ ಸಭೆ ನಡೆಯುತ್ತಿದ್ದು ಜನಜಾಗೃತಿ ವೇದಿಕೆ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿ ನಾವು ಜೀವನ ಸಮಿತಿ ಸದಸ್ಯರಿಗೆ ಮಾರ್ಗದರ್ಶನ ನೀಡಬಹುದೆಂದು ಚರ್ಚಿಸಲಾಯಿತು. ಪ್ರತಿಯೊಂದು ತಾಲೂಕಿನಲ್ಲಿ ಸಾಧನೆ ಮಾಡಿದ ನವಜೀವನ ಸಮಿತಿ ಸದಸ್ಯರ ವರ್ಷಕ್ಕೆ ಕನಿಷ್ಠ 10 ಯಶೋಗಾತೆ ಯನ್ನು ತಯಾರಿಸಿ ಕ್ಷೇತ್ರಕ್ಕೆ ಕಳಿಸುವ ಬಗ್ಗೆ ಚರ್ಚಿಸಲಾಯಿತು.